August 26, 2026

ಧರ್ಮಸ್ಥಳ: ಸೌಜನ್ಯ ಮನೆಗೆ ಆರ್‌ಎಸ್‌ಎಸ್ ಮುಖಂಡ ಪ್ರಭಾಕರ ಭಟ್ ಭೇಟಿ

0
IMG-20260826-WA0111

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾಗಿರುವ ಉಜಿರೆ ಎಸ್‌.ಡಿ.ಎಂ.ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅವರ ಧರ್ಮಸ್ಥಳ ಗ್ರಾಮದ ಪಾಂಗಳ ಮನೆಗೆ ಆರ್‌ಎಸ್‌ಎಸ್ ಹಿರಿಯ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ ಆ.26ರಂದು ಭೇಟಿ ನೀಡಿದರು.

ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪಗೌಡ ಅವರೊಂದಿಗೆ ಪ್ರಭಾಕರ ಭಟ್ ಮಾತುಕತೆ ನಡೆಸಿ, ಕುಟುಂಬಕ್ಕೆ ಧೈರ್ಯ ತುಂಬಿದರು ಎಂದು ತಿಳಿದುಬಂದಿದೆ.

ಕಳೆದ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ನಿರಂತರ ಹೋರಾಟ ಮಾಡುತ್ತಾ‌ ಬಂದಿದ್ದೀರಿ ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸಿ, ಕೊನೆಗೂ ಸತ್ಯಕ್ಕೆ ಗೆಲುವು ಸಿಗುವುದು ಖಚಿತ ಎಂದು ಕುಟುಂಬಕ್ಕೆ ಪ್ರಭಾಕರ ಭಟ್ ಧೈರ್ಯ ತುಂಬಿದರು ಎಂದು ತಿಳಿದುಬಂದಿದೆ.

ನ್ಯಾಯಕ್ಕಾಗಿನ ಹೋರಾಟದಲ್ಲಿ ‌ಸದಾ ಸೌಜನ್ಯ ಕುಟುಂಬಸ್ಥರೊಂದಿಗೆ ಇರುವುದಾಗಿ ಅವರು ಭರವಸೆ ನೀಡಿದರು ಎನ್ನಲಾಗಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಸೌಜನ್ಯ ಮನೆಯಲ್ಲಿ ಅವರು ಕಳೆದರು.

Leave a Reply

Your email address will not be published. Required fields are marked *

error: Content is protected !!