February 3, 2026

ರಾಜ್ಯ ಸರ್ಕಾರದಿಂದ ಆಸ್ತಿ ರಿಜಿಸ್ಟ್ರೇಶನ್ ಶುಲ್ಕದ ಮೇಲೆ 10% ಕಡಿತ

0
r-ashoka-992230-1622490686.jpg

ಬೆಂಗಳೂರು: ಕಂದಾಯ ಇಲಾಖೆ ರೆವಿನ್ಯೂ ಮನೆಯ ಗೈಡೆನ್ಸ್‌ ವ್ಯಾಲ್ಯೂ ಶೆ.10ರಷ್ಟು ಕಡಿಮೆ ಮಾಡಿದೆ. ಜಮೀನು, ಸೈಟು, ಪ್ಲ್ಯಾಟ್‌ ಖರೀದಿಗೆ ರಿಜಿಸ್ಟ್ರೇಷನ್‌ ಶುಲ್ಕ ಶೇಕಡಾ 10ರಷ್ಟು ಕಡಿಮೆ ಇರುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು,’ಆಸ್ತಿ ವಹಿವಾಟು ಸಂಬಂಧಿಸಿದಂತೆ, ಯಾರು ಖರೀದಿ ಮಾಡ್ತಾರೆ ಅಂತವರಿಗೆ ರೆವಿನ್ಯೂ, ಸೈಟ್, ಫ್ಲಾಟ್ ಗೈಡೆನ್ಸ್ ವ್ಯಾಲ್ಯು 10% ಕಡಿಮೆ ಮಾಡಲಾಗುತ್ತೆ. ಅಗ್ರಿಮೆಂಟ್ ಮಾಡಿರೋ, ರಿಜಿಸ್ಟ್ರೇಷನ್ ಮಾಡಿಸುವರಿಗೆ ಇದು ಅನ್ವಯಸಲಾಗಿದೆ. ಆದರೆ, ಮೂರು ತಿಂಗಳು ಮಾತ್ರ ಅವಕಾಶ ನೀಡಲಾಗಿದೆ’ ಎಂದರು.

ಇನ್ನು ‘ಇಂದಿನಿಂದ (ಜನವರಿ 2022) ಮಾರ್ಚ್‌ 31ರವರೆಗೂ ಈ ರಿಯಾಯಿತಿ ನೀಡಲು ನಿರ್ಧರಿಸಲಾಗಿದ್ದು, ರಾಜ್ಯದ ಸಚಿವರ ಜೊತೆ ಚರ್ಚೆ ಮಾಡಿ ಈ ನಿರ್ಧಾರ ಮಾಡಲಾಗಿದೆ. ಆಯಾ ಪ್ರದೇಶದ ಗೈಡ್‌ಲೈನ್ಸ್ ವ್ಯಾಲ್ಯೂ ಪ್ರಕಾರ ಇದು ಅನ್ವಯವಾಗಲಿದ್ದು, ಎಲ್ಲಾ ರೀತಿಯ ರಿಜಿಸ್ಟ್ರೇಷನ್‌ಗೆ ಇದು ಅನ್ವಯವಾಗಲಿದೆ’ ಎಂದರು.

Leave a Reply

Your email address will not be published. Required fields are marked *

error: Content is protected !!