August 20, 2026

ವಿಟ್ಲ: ಈದ್ ಮೀಲಾದ್ ಹಬ್ಬದ ಪ್ರಯುಕ್ತ ವಿಟ್ಲ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

0
IMG-20260820-WA0018

ವಿಟ್ಲ: ಈದ್ ಮೀಲಾದ್ ಹಬ್ಬದ ಪ್ರಯುಕ್ತ ವಿಟ್ಲ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.

ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಮಾತನಾಡಿ ಈದ್ ಮೀಲಾದ್ ರ್ಯಾಲಿಗೆ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು. ಸಂಚಾರ ನಿಯಮ ಪಾಲಿಸಿಬೇಕು. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು ಎಂದು ಹೇಳಿದರು.

ಮೀಲಾದ್ ಕಾರ್ಯಕ್ರಮ ರಾತ್ರಿ 10 ಗಂಟೆಗೆ ಮುಗಿಸಬೇಕು. ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾವುದು ಎಂದರು. ಕಳ್ಳತನ ಪ್ರಕರಣಗಳು ಸಂಭವಿಸದಂತೆ ಪ್ರಮುಖ ಜಾಗದಲ್ಲಿ ಸಿಸಿ ಕ್ಯಾಮರ ಅಳವಡಿಸಬೇಕು.‌ ಹೆಚ್ಚು ಜನ ಸೇರುವ ಕಟ್ಟಡಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮಾರ ಅಳವಡಿಸಬೇಕು. ಸಂಚಾಯ ನಿಯಮ ಉಲ್ಲಂಘಿಸಿದಂತೆ ವಿಟ್ಲದ ನಾಲ್ಕು ಜಂಕ್ಷನ್ ನಲ್ಲಿ ಎಐ ಕ್ಯಾಮರ ಅಳವಡಿಸಲಾಗಿದ್ದು, ಚಾಲನೆ ಕೂಡ ಸಿಕ್ಕಿದೆ. ಇದರಿಂದ ಸಂಚಾರ ನಿಯಮ ಉಲ್ಲಂಘಿಸುವವರ ಪತ್ತೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭ ವಿವಿಧ ಧರ್ಮಗಳ ಮುಖಂಡರು, ವಿಟ್ಲ ಪೊಲೀಸ್ ಠಾಣೆಯ ಎಸೈ ರತನ್ ಕುಮಾರ್, ಬಿ.ಎಸ್ ನಾಯಕ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.‌

Leave a Reply

Your email address will not be published. Required fields are marked *

error: Content is protected !!