ಕನ್ಯಾನ: EDU-SUPPORTERS ವತಿಯಿಂದ ದಾನಿಗಳ ಮತ್ತು ದುಲ್ ಪುಖಾರ್ ಗಲ್ಫ್ ಸಮಿತಿ ಸಹಕಾರದಲ್ಲಿ ಕನ್ಯಾನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಶುಲ್ಕ ಪಾವತಿ
ವಿಟ್ಲ: Edu -Supporters Kanyana ಇದರ ವತಿಯಿಂದ
ಕನ್ಯಾನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 15 ಬಡ ವಿದ್ಯಾರ್ಥಿಗಳ ಕಾಲೇಜು ಶುಲ್ಕ ₹90,000 ವನ್ನು
ಶಿಕ್ಷಣ ಪ್ರೇಮಿ ಕೊಡುಗೈ ದಾನಿಗಳ ಹಾಗೂ ದುಲ್ ಪುಖಾರ್ ಗಲ್ಫ್ ಸಮಿತಿಯ ಸಹಕಾರದೊಂದಿಗೆ ಪಾವತಿಸಲಾಯಿತು.
ಈ ಸಂದರ್ಭದಲ್ಲಿ ಕನ್ಯಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಕನ್ಯಾನ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ಕನ್ಯಾನ ಪ್ರಮುಖರಾದ ಆಸಿಫ್ ಬನಾರಿ ಜಮಾಲ್ ಕನ್ಯಾನ ರಹೀಂ ನೆಕ್ಲಾಜೆ ಮತ್ತು ಕಾಲೇಜು ಉಪನ್ಯಾಸಕರು ಉಪಸ್ಥಿತರಿದ್ದರು
ಈ ಮಹತ್ಕಾರ್ಯಕ್ಕೆ ಸಹಕರಿಸಿದ
ಎಲ್ಲಾ ದಾನಿಗಳಿಗೂ ಹಾಗೂ ಸಹಕಾರ ನೀಡಿದ ಪ್ರತಿಯೊಬ್ಬರಿಗೂ
ಹೃತ್ಪೂರ್ವಕ ಕೃತಜ್ಞತೆಗಳು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.




