June 24, 2026

ವಿಟ್ಲ; ಕೇಂದ್ರ ಜುಮಾ ಮಸೀದಿ, ವಾರ್ಷಿಕ ಮಹಾಸಭೆ

0
IMG-20260612-WA0056

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ಮಾಜಿ ಅಧ್ಯಕ್ಷ ವಿ.ಎಂ.ಇಬ್ರಾಹಿಂ ಮೇಗಿನಪೇಟೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಖತೀಬ್ ಆರಿಫ್ ಬಾಖವಿ ದುವಾ ನೆರವೇರಿಸಿದರು.
     ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು ಪ್ರಾಸ್ತಾವಿಕ ಭಾಷಣ ಮಾಡಿದರು.


  ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ  ಮಸೀದಿಯ ಲೆಕ್ಕಪತ್ರ ಹಾಗೂ  ಹಾಗೂ ಅಬೂಬಕರ್ ನೋಟರಿ ಶಾಲೆಯ ಲೆಕ್ಕಪತ್ರ ಹಾಗೂ  ಯೂತ್ ವಿಂಗ್  ಲೆಕ್ಕಪತ್ರವನ್ನು ಕಾರ್ಯದರ್ಶಿ ನಮೀರ್ ಹಳೆಮನೆ ಮಂಡಿಸಿದರು.
  ಮಸೀದಿಯ ಉಪಾಧ್ಯಕ್ಷರಾದ ವಿ.ಎಸ್.ಇಬ್ರಾಹಿಂ ಮತ್ತು ಮಹಮ್ಮದ್ ಗಮಿ, ಕೋಶಾಧಿಕಾರಿ ಶರೀಫ್ ಪೊನ್ನೋಟು, ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಅಝೀಝ್ ಸನ,ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್, ಜೊತೆ ಕಾರ್ಯದರ್ಶಿ ಇಕ್ಬಾಲ್ ಹಳೆಮನೆ,ಕೋಶಾಧಿಕಾರಿ ಅಂದುಞಿ ಗಮಿ,ಯೂತ್ ವಿಂಗ್ ಅಧ್ಯಕ್ಷ ರಫೀಕ್ ಪೊನ್ನೋಟು, ಉಪಾಧ್ಯಕ್ಷ ಮಹಮ್ಮದ್ ಅಲಿ ಮುಂತಾದವರು ಉಪಸ್ಥಿತರಿದ್ದರು.


ಮಸೀದಿಯ ಜೊತೆ ಕಾರ್ಯದರ್ಶಿ  ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!