ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ
ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರಿಗೆ ಅಭಿನಂದನಾ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ JEE ಅಡ್ವಾನ್ಸ್ ನಲ್ಲಿ 2321 ನೇ ಸ್ಥಾನಗಳಿಸಿದ ಮೊಹಮ್ಮದ್ ಮಿಹ್ರಾನ್ ಅಬ್ದುಲ್ ಖಾದರ್ ವಿಟ್ಲ,ತಾವು ನಡೆದು ಬಂದ ಹಾದಿಯನ್ನು ಉಲ್ಲೇಖಿಸುತ್ತಾ JEE ಪರೀಕ್ಷೆ ಕೇವಲ ಶ್ರೀಮಂತರಿಗೆ ಅನ್ನುವ ಮನಸ್ಥಿತಿ ಹಲವರಲ್ಲಿದೆ. ಕಲಿಯುವ ಮನಸ್ಸು, ಮತ್ತು ಸಾಧಿಸುವ ಛಲ ಇದ್ದರೆ ಯಾರಿಗೂ ಗೆಲುವು ಸಾಧಿಸಬಹುದು. ಪೋಷಕರ ಗುರುಹಿರಿಯರ ಆಶೀರ್ವಾದವಿದ್ದರೆ ನಾವು ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೇರಬಹುದು ಹಾಗೂ ತಮ್ಮ ಸಾಧನೆಗೆ ಪ್ರೆರೇಪಿಸಿದ ವ್ಯಕ್ತಿಗಳನ್ನು ಮರೆಯಬಾರದು ಎಂದು ಹೇಳಿದರು.

ಅನುಗ್ರಹ ಮಹಿಳಾ ಕಾಲೇಜಿನ ಸಂಚಾಲಕರಾದ ಶ್ರೀಯುತ ಅಮಾನುಲ್ಲಾ ಖಾನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಇಂದು ಅತಿಥಿಯಾಗಿ ಆಗಮಿಸಿದ ಮಿಹ್ರಾನ್ ದೇಶ ಮತ್ತು ವಿಶ್ವದಲ್ಲಿ ದ್ರುವ ತಾರೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ತಳಮಟ್ಟದಿಂದ ಉನ್ನತ ಮಟ್ಟಕ್ಕೆ ಸಾಧನೆಗೈದ
ಡಾ. ಬಿ. ಆರ್. ಅಂಬೇಡ್ಕರ್, ಮಿಸೆಲ್ ಮ್ಯಾನ್ ಎಪಿಜೆ ಅಬ್ದುಲ್ ಕಲಾಂ, ಆರ್. ವೆಂಕಟರಾಮನ್, ಕಲ್ಪನಾ ಚಾವ್ಲ ಮುಂತಾದ ಸಾಧಕರ ಉದಾಹರಣೆಗಳನ್ನು ನೀಡುತ್ತಾ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಕುರಿತು ತಾವು ತಮ್ಮ ಸಾಧನೆಯನ್ನು ಇಲ್ಲಿಗೆ ನಿಲ್ಲಿಸದೆ ಮುಂದುವರಿಸಬೇಕು ಎಂದು ಅವರ ಸಾಧನೆಗೆ ಪ್ರೋತ್ಸಾಹಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಖಜಾಂಜಿ ಶ್ರೀಯತ ಹೈದರ್ ಆಲಿ, ಅತಿಥಿಯಾಗಿರುವ ಮಿಹ್ರಾನ್ ನ ಸಾಧನೆಯ ಹಾದಿಯ ಕುರಿತು ಪ್ರಸಂಶಿಸುತ್ತಾ, ಅವರ ಹಾಗೆಯೇ ಎಲ್ಲರೂ ತಮ್ಮ ಅಸ್ಮಿತೆಯನ್ನು ಮರೆಮಾಚದೆ ಧಾರ್ಮಿಕ ಶಿಸ್ತುವಿನೊಂದಿಗೆ ಸಾಧನೆ ಮಾಡಬೇಕು ಎಂದು ತಿಳಿ ಹೇಳಿದರು.
ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಬಬಿತಾ ಪ್ರಿಯ ಲಸ್ರಾಡೊರವರ ಮೇಲ್ನೋಟದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಹಾಗೆ ಜೆಇಇ ಅಡ್ವಾನ್ಸ್ ನಲ್ಲಿ 2321 ನೇ ಸ್ಥಾನಗಳಿಸಿದ ಅತಿಥಿ ಸಾಧಕರಾದ ಮೊಹಮ್ಮದ್ ಮಿಹ್ರಾನ್ ಅಬ್ದುಲ್ ಖಾದರ್ ರವರನ್ನು ಕಾಲೇಜಿನ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅನುಗ್ರಹ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಯಾಸಿನ್ ಬೇಗ್, 2025- 26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 100 ದಾಖಲೆಗೆ ಕಾರಣೀಕರ್ತರಾದ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು. ಹಾಗೂ ವಾಣಿಜ್ಯ ವಿಭಾಗದಲ್ಲಿ ಐದು ವಿಷಯಗಳಲ್ಲಿ ನೂರು ಅಂಕಗಳಿಸಿದ ವಿದ್ಯಾರ್ಥಿನಿಯಾದ ಫಾತಿಮತ್ ಶಹೀಮರನ್ನು ಉಲ್ಲೇಖಿಸಿ, ಅವರಿಗೂ ಶುಭ ಹಾರೈಸಿದರು. ಸಾಧನೆಗೆ ಶಿಸ್ತು ಪರಿಶ್ರಮ ಅತ್ಯಗತ್ಯ ಹಾಗೆಯೇ ಮನೆಯ ವಾತಾವರಣ ಕೂಡ ಪೂರಕವಾಗಿರಬೇಕೆಂದು ಅಭಿಪ್ರಾಯ ಪಟ್ಟರು. ದ್ವಿತೀಯ ಪಿಯುಸಿ ಸಾಧಕರನ್ನು ಉದ್ದೇಶಿಸಿ, ಇದು ಕೇವಲ ತಮ್ಮ ಸಾಧನೆಯ ಒಂದು ಮೈಲಿಗಲ್ಲು, ಭವಿಷ್ಯದಲ್ಲಿ ಸಾಧಿಸಲು ಹಲವಾರು ಅವಕಾಶಗಳು ಇದೆ ಎಂದು ಹೇಳಿದರು. ಮುಂದಿನ ಕೆಲವು ತಿಂಗಳು ಗಳಲ್ಲಿ ಅನುಗ್ರಹ ಕ್ಯಾಂಪಸ್ ಹೆಚ್ಚಿನ ಅಭಿವೃದ್ಧಿಯನ್ನು ಕಾಣಲಿದ್ದು ಕಲಿಕೆಯ ವಾತಾವರಣವನ್ನು ಕ್ರಿಯಾತ್ಮಕಗೊಳಿಸಿ ಕೊಡಲಿದೆ ಎಂದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಶ್ರೀಯುತ ಅಬ್ದುಲ್ಲಾ ಚೆಂಡಾಡಿ, ಆಡಳಿತ ಮಂಡಳಿಯ ಟ್ರಸ್ಟಿ ಗಳಾದ ಆದಂ ಇಸ್ಮಾಯಿಲ್,ಹಮೀದ್ ವಿ. ಕೆ., ಪ್ರಾಂಶುಪಾಲೆ ಡಾ. ಹೇಮಲತಾ ಬಿ.ಡಿ., ಅನುಗ್ರಹ ಸಲಹಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ತಾರಾಕ್ಷಿ, ಪದವಿ ಪೂರ್ವ ಮತ್ತು ಪದವಿಯ ಸಂಯೋಜಕರಾದ ಶ್ರೀಮತಿ ಮಮಿತಾ ಎಸ್. ರೈ ಹಾಗೂ ಶ್ರೀಮತಿ ಆಬಿದಾ ಬಿ. ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುl ಮುನ ಫಾತಿಮಾ ಕಿರಾಅತ್ ಪಠಿಸಿ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುl ಫಾತಿಮತ್ ಅಜ್ಮಿಯ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಕವಿತಾ ಕುಮಾರಿ ಅತಿಥಿಗಳನ್ನು ಪರಿಚಯಿಸಿ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುl ಲಿಯ ಮರಿಯಂ ಬಸ್ತಿಕಾರ್ ವಂದಿಸಿ, ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುl ನುಹಾ ಮರಿಯಮ್ ಹೈದರ್ ಕಾರ್ಯಕ್ರಮವನ್ನು ನಿರೂಪಿಸಿದರು.




