ಮಂಜೇಶ್ವರ: ಇಬ್ಬರು ಬಾಲಕರು ನಾಪತ್ತೆ
ಮಂಜೇಶ್ವರ: ಇಬ್ಬರು ಬಾಲಕರು ನಾಪತ್ತೆಯಾದ ಘಟನೆ ಕಾಸರಗೋಡಿನ ಮಂಜೇಶ್ವರ ಸಮೀಪದ ಕುಂಜತ್ತೂರಿನಲ್ಲಿ ನಡೆದಿದೆ.
ಕುಂಜತ್ತೂರು ಸ್ವಾಗತ್ ಹೊಟೇಲ್ ಸಮೀಪದ ಯಾಸಿನ್ ( 13) ಮತ್ತು ಸುಲ್ತಾನ್ (14) ನಾಪತ್ತೆಯಾದವರು. ಶನಿವಾರ ಸಂಜೆ ಐದು ಗಂಟೆ ಬಳಿಕ ನಾಪತ್ತೆಯಾಗಿರುವುದಾಗಿ ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಾಲಕರ ಬಗ್ಗೆ ಗುರುತು, ಸುಳಿವು ಲಭಿಸಿದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.




