SDPI ಉಪ್ಪಿನಂಗಡಿ -ಕಡಬ ಬ್ಲಾಕ್ ಸಮಿತಿ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಸುಲೈಮಾನ್ ಬಿ ಕೆ, ಕಾರ್ಯದರ್ಶಿಯಾಗಿ ಸಿದ್ದೀಕ್ ನೆಲ್ಯಾಡಿ ಆಯ್ಕೆ
ಉಪ್ಪಿನಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಉಪ್ಪಿನಂಗಡಿ – ಕಡಬ ನೂತನ ಬ್ಲಾಕ್ ಸಮಿತಿ ರಚನೆಯಾಗಿದ್ದು, ಇದರ ಅಧ್ಯಕ್ಷರಾಗಿ ಸುಲೈಮಾನ್ ಬಿಕೆ ಹಾಗೂ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಸಿದ್ದೀಕ್ ನೆಲ್ಯಾಡಿ ಆಯ್ಕೆಯಾಗಿದ್ದಾರೆ.
ಈ ಬ್ಲಾಕ್ ವ್ಯಾಪ್ತಿಯಲ್ಲಿ, ಕಡಬ ತಾಲೂಕಿನ ಕಡಬ ಪಟ್ಟಣ ಪಂಚಾಯತ್ ಕುಟ್ರುಪ್ಪಾಡಿ, ಅಲಂಗಾರು, ರಾಮಕುಂಜ, ಕೊಯಿಲ, ನೆಲ್ಯಾಡಿ, ಕೌಕ್ರಡಿ, ಮರ್ದಾಳ, ಐತ್ತೂರು, ಬಲ್ಪ, ಕೊಂಬಾರು, ಪೆರಾಬೆ, ನೂಜಿಬಾಳ್ತಿಲ, ಶೀರಾಡಿ, ಗೊಳಿತೊಟ್ಟು, ಕೊಣಾಳು ಗ್ರಾಮಗಳು ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಇಳಂತಿಲ ಗ್ರಾಮ ಮತ್ತು ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು, ನೆಕ್ಕಿಲಾಡಿ, ಕೋಡಿoಬಾಡಿ, ಪೆರ್ನೆ ಗ್ರಾಮಗಳು ಒಳಗೊಂಡಿದೆ.ಉಪ್ಪಿನಂಗಡಿಯ ಎಚ್ ಎಮ್ ಸಭಾಂಗಣದಲ್ಲಿ ನಡೆದ ಬ್ಲಾಕ್ ಪ್ರತಿನಿಧಿ ಸಬೆಯಲ್ಲಿ ಈ ಆಯ್ಕೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಹನ್ನೊಂದು ಮಂದಿಯ ಬ್ಲಾಕ್ ಸಮಿತಿಯನ್ನು ರಚಿಸಲಾಗಿದ್ದು, ಉಪಾಧ್ಯಕ್ಷರಾಗಿ ಮುಸ್ತಫಾ ಮುಸ್ಲಿಯಾರ್, ಜತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ತುಫೈಲ್ ಮತ್ತು ಆಸೀಫ್ ನೆಕ್ಕಿಲಾಡಿ, ಕೋಶಾಧಿಕಾರಿಯಾಗಿ ರಶೀದ್ ಮಠ ಸಮಿತಿ ಸದಸ್ಯರಾಗಿ ಝಕರಿಯ ಕೊಡಿಪ್ಪಾಡಿ, ಬಷೀರ್ ಕಡಬ, ನೌಫಲ್ ಅತೂರು, ಅಬ್ದುಲ್ ರಹ್ಮಾನ್, ಮತ್ತು ನಝೀರ್ ಕೋಡಿಂಬಾಡಿ ಯವರು ಆಯ್ಕೆಯಾಗಿದ್ದಾರೆ.ಬ್ಲಾಕ್ ಪ್ರತಿನಿಧಿ ಸಭೆಯಲ್ಲಿ SDPI ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧಿಕ್ ಪುತ್ತೂರು, ಜಿಲ್ಲಾ ಸಮಿತಿ ಸದಸ್ಯರಾದ ಸಿದ್ಧಿಕ್ ಅಲೆಕ್ಕಾಡಿ ಮತ್ತು ಕಬೀರ್ ಕೆಮ್ಮಾರ ಚುನಾವಣಾ ಪ್ರಕ್ರಿಯೆ ನಡೆಸಿದರು.


