September 22, 2026

ವಿಟ್ಲ: ವಿಟ್ಠಲ್ ಪದವಿ ಪೂರ್ವ ಕಾಲೇಜ್ ನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಡ್ರಗ್ಸ್ ಜಾಗೃತಿ ಕಾರ್ಯಾಗಾರ

0
image_editor_output_image-1045057516-1781171810827

ವಿಟ್ಲ: ವಿಟ್ಠಲ ಎಜುಕೇಶನ್ ಸೊಸೈಟಿ ವಿಟ್ಲ ಇದರ ಆಶ್ರಯದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಡ್ರಗ್ಸ್ ಜಾಗೃತಿ, ಮಹಿಳಾ ರಕ್ಷಣೆ ಮತ್ತು ಪೋಕ್ಸೊ ಕುರಿತು ಮಾಹಿತಿ ಕಾರ್ಯಗಾರ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ದ ಕ ಜಿಲ್ಲೆ ಮಂಗಳೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.

 

ವಿಟ್ಲ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ, ವಿಟ್ಠಲ ಎಜುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಸಂಚಾಲಕ ರಾಧಾಕೃಷ್ಣ ನಾಯಕ್ ಕಾರ್ಯದರ್ಶಿ ಶಂಕರನಾರಾಯಣ ಪ್ರಸಾದ್, ಪಾಂಶುಪಾಲ ಆದರ್ಶ ಚೊಕ್ಕಾಡಿ, ಉಪಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ, ಸದಸ್ಯ ನಿತ್ಯಾನಂದ ನಾಯಕ್, ಸುದರ್ಶನ ಪಡಿಯಾರ್, ಉಪನ್ಯಾಸಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!