September 22, 2026

‘TATTO – 313’ ಜಾಲವನ್ನು ಭೇದಿಸಿದ ಮಣಿಪಾಲ ಪೊಲೀಸರು: 7.90 ಲಕ್ಷ ಮೌಲ್ಯದ ಚಿನ್ನಾಭರಣ ಸಹಿತ ಆರೋಪಿಗಳ ಬಂಧನ

0
image_editor_output_image-1546153673-1781085839088.jpg

ಮಣಿಪಾಲ: ರೈಲ್ವೆ ನಿಲ್ದಾಣಗಳ ಸಮೀಪವಿರುವ ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ ದರೋಡೆ ಮಾಡುತ್ತಿದ್ದ ಅಂತರ್-ರಾಜ್ಯ ಮುಸುಕುಧಾರಿ ಕಳ್ಳರ ತಂಡ ‘TATTO – 313’ ಜಾಲವನ್ನು ಭೇದಿಸುವಲ್ಲಿ ಮಣಿಪಾಲ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೃತ್ತಿಪರ ಕಳ್ಳರನ್ನು ಬಂಧಿಸಲಾಗಿದ್ದು, ಅವರಿಂದ ಅಂದಾಜು ₹7.90 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಮಂಚಿಕೋಡಿ ನಿವಾಸಿ ಅಮಿತಾ ಡ್ಯಾನಿಯಲ್ ಅವರು ಕಳೆದ ಫೆಬ್ರವರಿ 3ರಂದು ನಸುಕಿನ ವೇಳೆ ತಮ್ಮ ಮನೆಗೆ ಬೀಗ ಹಾಕಿ ತಾಯಿಯ ಮನೆಗೆ ತೆರಳಿದ್ದರು. ಫೆಬ್ರವರಿ 4ರಂದು ಮಧ್ಯಾಹ್ನ ಅವರ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಪಕ್ಕದ ಮನೆಯವರು ಅಮಿತಾ ಅವರಿಗೆ ಮಾಹಿತಿ ನೀಡಿದ್ದರು.

 

ಅಮಿತಾ ಅವರು ಬಂದು ಪರಿಶೀಲಿಸಿದಾಗ ಕಳ್ಳರು ಬಾಗಿಲು ಮುರಿದು ಒಳನುಗ್ಗಿ ಕಪಾಟಿನಲ್ಲಿದ್ದ 75 ಗ್ರಾಂ ತೂಕದ ₹7 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 15/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಪ್ರಕರಣ ದಾಖಲಿಸಲಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!