June 10, 2026

ಈಜಲು ಹಳ್ಳಕ್ಕೆ ಇಳಿದಿದ್ದ ಅಣ್ಣ- ತಮ್ಮ ಇಬ್ಬರೂ ನೀರುಪಾಲು

0
image_editor_output_image-1960559422-1781083763272.jpg

ಬೆಳಗಾವಿ: ಈಜಲು ಹಳ್ಳಕ್ಕೆ ಇಳಿದಿದ್ದ ಅಣ್ಣ- ತಮ್ಮ ಇಬ್ಬರೂ ನೀರುಪಾಲಾದ ಘಟನೆ ಮೂಡಲಗಿ  ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಾಗರ್ ಮಾದರ (15), ಪ್ರವೀಣ್ ಮಾದರ (13) ಮೃತ ಸಹೋದರರು. ಇಬ್ಬರು ಹಳ್ಳದಲ್ಲಿ ಈಜಲು ತೆರಳಿದ್ದರು. ಈ ವೇಳೆ ನೀರಿಗಿಳಿದಾಗ ಪ್ರವೀಣ್ ಮುಳುಗಿದ್ದಾನೆ. ಇದನ್ನು ಗಮನಿಸಿ ಆತನ ರಕ್ಷಣೆಗೆ ಸಾಗರ್ ತೆರಳಿದ್ದು, ಆತನೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

Leave a Reply

Your email address will not be published. Required fields are marked *

error: Content is protected !!