June 9, 2026

ಬಂಟ್ವಾಳ: ಮಸೀದಿಯಲ್ಲಿ ಆಝಾನ್ (ಬಾಂಗ್) ಸಂದರ್ಭದಲ್ಲೇ ಕುಸಿದು ಬಿದ್ದು ಧರ್ಮಗುರು ಕುಕ್ಕಾಜೆ ಅಬ್ದುಲ್ ಲತೀಫ್ ಮದನಿ ನಿಧನ

0
IMG-20260609-WA0004.jpg

ಬಂಟ್ವಾಳ: ಮಸೀದಿಯಲ್ಲಿ ಆಝಾನ್ (ಬಾಂಗ್) ನೀಡುತ್ತಿದ್ದ ಸಂದರ್ಭದಲ್ಲೇ ಧರ್ಮಗುರುಗಳೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪುಚ್ಚೆಕೆರೆ ನಿವಾಸಿ, ನೂಜಿ ಉಸ್ಮಾನ್ ಅವರ ಪುತ್ರ ಹಾಗೂ SYS ಕುಕ್ಕಾಜೆ ಯೂನಿಟ್ ಸದಸ್ಯರಾಗಿದ್ದ ಅಬ್ದುಲ್ ಲತೀಫ್ ಮದನಿ (50) ಮೃತಪಟ್ಟ ದುರ್ದೈವಿ ಧರ್ಮಗುರುಗಳಾಗಿದ್ದಾರೆ.

ಇಂದು ಸಂಜೆ ಸುಮಾರು 4 ಗಂಟೆಯ ನಮಾಜ್ ಸಮಯಕ್ಕೆ ಸರಿಯಾಗಿ ಹೊನ್ನಾವರದ ಮಸೀದಿಯಲ್ಲಿ ಅಬ್ದುಲ್ ಲತೀಫ್ ಮದನಿ ಅವರು ಆಝಾನ್ ನೀಡುತ್ತಿದ್ದರು. ಈ ವೇಳೆ ಅವರಿಗೆ ದಿಢೀರನೆ ತೀವ್ರ ಸ್ವರೂಪದ ಹೃದಯಾಘಾತ ಸಂಭವಿಸಿದೆ. ಪರಿಣಾಮವಾಗಿ ಅವರು ಮೈಕ್ ಮುಂದೆಯೇ ಸ್ಥಳದಲ್ಲೇ ಕುಸಿದು ಬಿದ್ದು, ಕೊನೆಯುಸಿರೆಳೆದಿದ್ದಾರೆ. ಆಝಾನ್ ಕೂಗುತ್ತಿದ್ದಾಗಲೇ ಧರ್ಮಗುರುಗಳು ಮೃತಪಟ್ಟ ಘಟನೆ ಸ್ಥಳೀಯವಾಗಿ ತೀವ್ರ ಸಂಕಷ್ಟತೆ ಹಾಗೂ ಭಾವುಕತೆಯನ್ನು ಮೂಡಿಸಿದೆ.

ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ, ಧಾರ್ಮಿಕ ವಲಯದ ಪ್ರಮುಖರನ್ನು ಅಗಲಿದ್ದಾರೆ. ಧರ್ಮಗುರುಗಳ ನಿಧನಕ್ಕೆ SYS ಸಂಘಟನೆ ಹಾಗೂ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!