June 2, 2026

ದೇಲಂತಬೆಟ್ಟು ಶಾಲಾ ಪ್ರಾರಂಭೋತ್ಸವ

0
IMG-20260601-WA0105


ದೇಲಂತಬೆಟ್ಟು: ಇಲ್ಲಿನ ದ.ಕ.ಜಿ.ಪ. ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಮೆಗಾ ಪೋಷಕರ ಸಭೆ ಜರುಗಿತು.


ದಾಖಲಾತಿ ಮೆರವಣಿಗೆಯ ಬಳಿಕ ವಿದ್ಯಾರ್ಥಿಗಳನ್ನು ಹೂಮಳೆಯೊಂದಿಗೆ ಸ್ವಾಗತಿಸಿ, ಉಚಿತ ಪಠ್ಯಪುಸ್ತಕ ಹಾಗೂ ಸಿಹಿ ವಿತರಿಸಲಾಯಿತು. ಹೊಸದಾಗಿ ಸೇರಿದ ಪುಟಾಣಿಗಳನ್ನು ಹಾಗೂ ನೂತನ ಶಿಕ್ಷಕಿಯರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.


ಎಸ್.ಡಿ.ಎಂ.ಸಿ ಅಧ್ಯಕ್ಷ ಅಬೂಬಕರ್ ಸಿದ್ಧಿಕ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಹಾಜಿ ಅಬ್ದುಲ್ ಕುಂಞಿ, ಕವಿತಾ ಲಕ್ಷ್ಮಿ, ಝಿಯಾದ್ ಬಿ.ಕೆ, ಪಿ.ಬಿ. ಮೊಯಿದೀನ್ ಹಾಗೂ ಹನೀಫ್ ಬಿ.ಕೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ನಳಿನಾಕ್ಷಿ ಸ್ವಾಗತಿಸಿ, ಸಹ ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮಧ್ಯಾಹ್ನ ಸಭೆ ಹಾಗೂ ಪಾಯಸದೂಟ ನಡೆಯಿತು.

Leave a Reply

Your email address will not be published. Required fields are marked *

error: Content is protected !!