May 26, 2026

ಬೆಳ್ತಂಗಡಿ: ಕಾರು, ಬೈಕ್ ನಡುವೆ ಅಪಘಾತ: ಫೋಟೋಗ್ರಾಫರ್ ಗಣೇಶ್ ಗೌಡ ಸಾವು

0
image_editor_output_image741946135-1779776078759.jpg

ಬೆಳ್ತಂಗಡಿ: ಸೋಮಂತಡ್ಕ ಅಗರಿ ಕ್ರಾಸ್ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಫೋಟೋಗ್ರಾಫರ್ ಗಣೇಶ್ ಗೌಡ(36) ಅವರು ಮೇ 25ರಂದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಳೆಂಜ ನಿವಾಸಿ ನೋಣಯ್ಯ ಗೌಡ ಅವರ ಪುತ್ರರಾದ ಗಣೇಶ್ ಗೌಡ ಅವರು ಕಾಯರ್ತಡ್ಕದಲ್ಲಿ ತಮ್ಮದೇ ಆದ ಗಣೇಶ್ ಸ್ಟುಡಿಯೋ ನಡೆಸುತ್ತಿದ್ದರು.

ಗಣೇಶ್ ಗೌಡ ಅವರು ಮೇ 24 ರಂದು ಉಜಿರೆಯಿಂದ ಕಕ್ಕಿಂಜೆ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಕಾರಿಗೆ ಢಿಕ್ಕಿ ಹೊಡೆದಿದ್ದು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಸೋಮವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!