May 7, 2026

ಬಂಟ್ವಾಳ: ತಲಪಾಡಿ ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ನಝೀರ್ ಟಿ.ಎಂ. ನಿಧನ

0
image_editor_output_image-1259874310-1778135785600.png

ಬಂಟ್ವಾಳ: ಬಿ.ಸಿ.ರೋಡ್ ತಲಪಾಡಿ ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ನಝೀರ್ ಟಿ. ಎಂ.(57) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ತಲಪಾಡಿ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಝೀರ್ ಅವರು, ಸೌಮ್ಯ ಸ್ವಭಾವದವರಾಗಿದ್ದು, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಮೃತರು ಪುತ್ರಿ, ಇಬ್ಬರು ಪುತ್ರರು, ಸಹಿತ ಅಪಾರ ಸಂಖ್ಯೆಯ ಬಂಧುಗಳನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಗುರುವಾರ ತಲಪಾಡಿಯ ಮೊಫತ್ಲಾಲ್ ವಠಾರದ ದಫನ ಭೂಮಿಯಲ್ಲಿ ನಡೆಯಿತು.

ಮೃತರಿಗೆ ತಲಪಾಡಿ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ, ಅಲ್ ರಹ್ಮಾ ಫೌಂಡೇಶನ್ ತಲಪಾಡಿ ಸಂತಾಪ ಸೂಚಿಸಿದೆ.

Leave a Reply

Your email address will not be published. Required fields are marked *

error: Content is protected !!