May 4, 2026

ವಿಟ್ಲ: ಅಮಲು ಪದಾರ್ಥ ಸೇವಿಸಿ ವಾಹನ ತಪಾಸಣೆ ನಡೆಸುತ್ತಿದ್ದ  ಪೊಲೀಸರೊಂದಿಗೆ ಅನುಚಿತ ವರ್ತನೆ: ಕೊಳ್ನಾಡು ಗ್ರಾಮದ ಅಸ್ಬೀರ್ ಎಂಬಾತನ ಬಂಧನ

0
image_editor_output_image907674703-1777910061939

ವಿಟ್ಲ: ಬಿ ಎಸ್ ನಾಯಕ್ ಪೊಲೀಸ್ ಉಪ ನಿರೀಕ್ಷಕರು, ವಿಟ್ಲ ಪೊಲೀಸ್ ಠಾಣೆರವರು ಸಿಬ್ಬಂದಿಗಳೊಂದಿಗೆ ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿರುವಾಗ, ಅದೇ ಮಾರ್ಗದಲ್ಲಿ KA-19-HX-0497ನೇ ನಂಬ್ರದ ಸ್ಕೂಟರ್ ನಲ್ಲಿ ಅದರ ಸವಾರ ಹೆಲ್ಮೇಟ್ ಧರಿಸದೇ ವಾಹನ ಚಲಾಯಿಸಿಕೊಂಡು ಬಂದಿದ್ದು, ಅತನನ್ನು ತಪಾಸಣೆಗಾಗಿ ತಡೆದು ನಿಲ್ಲಿಸಿದಾಗ, ಆರೋಪಿತನು ಉಪ ನಿರೀಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.

ಈತನ ವರ್ತನೆಯಿಂದ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಸಂಶಯಗೊಂಡು ಈ ಬಗ್ಗೆ ವಿಚಾರಿಸಿದಾಗ, ಆತನು ಬಂಟ್ವಾಳ ಕೊಳ್ನಾಡು ನಿವಾಸಿ ಮಹಮ್ಮದ್ ಅಸ್ಬೀರ್ (26) ಎಂಬುದಾಗಿ ತಿಳಿಸಿದ್ದು, ತಾನು ಮಾದಕವಸ್ತು ಸೇವನೆ‌ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.

ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿ ಮಾದಕವಸ್ತು ಸೇವನೆ ಧೃಢಪಟ್ಟಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ:100/2026, ಕಲಂ: 27 (b) NDPS Act 1985, 221 BNS ಮತ್ತು KMV Rule 230(1) ಜೊತೆಗೆ 177 IMV Act ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!