ಎಸ್ಸೆಸ್ಸೆಫ್ ಸ್ಥಾಪಕ ದಿನದ ಪ್ರಯುಕ್ತ ಕೆರೆಬಳಿಯಲ್ಲಿ ವಿವಿಧ ಕಾರ್ಯಕ್ರಮ
ಸಿದ್ಧಕಟ್ಟೆ: ಗ್ರ್ಯಾಂಡ್ ಮುಫ್ತಿ ಆಫ್ ಇಂಡಿಯಾ ಎಪಿ ಉಸ್ತಾದರು ನೇತೃತ್ವ ನೀಡುವ ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) 1973 ಎಪ್ರಿಲ್ 29 ರಂದು ಕೇರಳದ ಪಟ್ಟಿಕ್ಕಾಡ್ ನಲ್ಲಿ ಜನ್ಮತಾಳಿದ ದಿನ, ಇಂದು 54 ನೇ ವರ್ಷಕ್ಕೆ ಪಾದಾರ್ಪಣೆ ಮಾಡುವಾಗ ಭಾರತ ದೇಶದ ಎಲ್ಲಾ ರಾಜ್ಯಗಳ ಪ್ರತಿ ಗ್ರಾಮಗಳಲ್ಲಿ ಸಂಘಟನೆ ವಿಸ್ತರಿಸಿದೆ. ಇದರ ಪ್ರಯುಕ್ತ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್, ಎಸ್ಸೆಸ್ಸೆಫ್ ಕೆರೆಬಳಿ ಯುನಿಟ್ ವತಿಯಿಂದ ಉಚಿತ ಸಾಮೂಹಿಕ ಎಂಟು ಮಕ್ಕಳ ಸುನ್ನತ್ (ಮುಂಜಿ) ಕಾರ್ಯಕ್ರಮ ಡಾ. ಸಿದ್ದೀಕ್ ಅಡ್ಡೂರು ಇವರ ತಂಡದಿಂದ ನಡೆಯಿತು ಹಾಗೂ ಹಜ್ಜ್ ಯಾತ್ರೆಗೆ ಹೊರಟಿರುವ ಪಿ.ಹೆಚ್ ಉಸ್ಮಾನ್, ಕೆ.ಪಿ ಹಂಝ ಹಾಗೂ ಕೆ.ಪಿ ಖಾದರ್ ಇವರಿಗೆ ಬೀಳ್ಕೊಡುಗೆ ನಡೆಯಿತು.
ಕಾರ್ಯಕ್ರಮ ಬೆಳಿಗ್ಗೆ 07:00 ಗಂಟೆಗೆ ಎಂ.ಜೆ.ಎಂ ಮಸೀದಿ ಕೆರೆಬಳಿಯಲ್ಲಿ ಎಂ.ಜೆ.ಎಂ ಕೆರೆಬಳಿ ಆಡಳಿತ ಸಮಿತಿಯ ಅಧ್ಯಕ್ಷರಾದ ಹೆಚ್. ಉಮರ್ ಫಾರೂಕ್ ಧ್ವಜಾರೋಹಣ ನೆರವೇರಿಸಿದರು. ಎಸ್ಸೆಸ್ಸೆಫ್ ಕೆರೆಬಳಿ ಯುನಿಟ್ ಉಪಾಧ್ಯಕ್ಷರಾದ ಸಗೀರ್ ಸರ್ವರನ್ನು ಸ್ವಾಗತಿಸಿದರು, ಎಸ್.ವೈ.ಎಸ್ ಕೆರೆಬಳಿ ಯುನಿಟ್ ಉಪಾಧ್ಯಕ್ಷ ಮುಹಮ್ಮದ್ ಆರಿಫ್ ಮದನಿ ಉದ್ಘಾಟಿಸಿದರು. ಎಂ.ಜೆ.ಎಂ ಪುಚ್ಚಮೊಗರು ಖತೀಬರಾದ ಹುಸೈನ್ ಸಖಾಫಿ ಅಲ್ ಫುರ್ಖಾನಿ ಶುಭ ಹಾರೈಸಿದರು. ಎಂ.ಜೆ.ಎಂ ಕೆರೆಬಳಿ ಖತೀಬರಾದ ಮುಹಮ್ಮದ್ ಸ್ವಾದಿಕ್ ಸಖಾಫಿ ಅಲ್ ಮುಈನಿ ಬೆಲಾಲು ಎಸ್ಸೆಸ್ಸೆಫ್ ಸಂಘಟನೆಯ ಬಗ್ಗೆ ಸಮಗ್ರವಾಗಿ ಸಂದೇಶ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಶಮೀರ್ ಹಾಶಿಮಿ, ಅಬ್ದುಲ್ ಕರೀಂ, ಎಸ್.ಎಂ ಹುಸೈನ್, ಅಹ್ಮದ್.ಜೆ, ಖಾದರ್.ಡಿ, ಸಿರಾಜ್.ಕೆ, ಮಜೀದ್ ಎಸ್.ಎ, ಬಾದಿಶಾ ಪಿ.ಹೆಚ್, ಸಲ್ಮಾನ್, ಜಾಬಿರ್ ಕೆರೆಬಳಿ, ಹಸೈನಾರ್ ಕೆ.ಸಿ, ಹನೀಫ್ ಪುಚ್ಚಮೊಗರು, ಜಮಾಲ್.ಜೆ, ಸಿನಾನ್ ಕೆ.ಪಿ, ಹನೀಫ್.ಜೆ ಉಪಸ್ಥಿತರಿದ್ದರು.









