April 29, 2026

ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಗಳಿಸಿದ ಕೌಶಿಕ್ ಶೆಟ್ಟಿ ರವರಿಗೆ ಸನ್ಮಾನ

0
IMG-20260428-WA0008.jpg

ಬೆಳ್ತಂಗಡಿ: 2025-26ನೇ ಸಾಲಿನ ಕರ್ನಾಟಕ ರಾಜ್ಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 618 ಅಂಕ ಪಡೆದು ರಾಜ್ಯದಲ್ಲಿ 8ನೇ ಸ್ಥಾನ ಗಳಿಸಿರುವ ಬೆಳ್ತಂಗಡಿಯ ಪ್ರತಿಭಾನ್ವಿತ ವಿದ್ಯಾರ್ಥಿ ಕೌಶಿಕ್ ಶೆಟ್ಟಿ ರವರನ್ನು ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಭಾನುವಾರ ಸನ್ಮಾನಿಸಲಾಯಿತು. ಮಚ್ಚಿನ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಕೌಶಿಕ್ ಶೆಟ್ಟಿ, ಬೆಳ್ತಂಗಡಿ ಪಟ್ಟಣ ಪಂಚಾಯತ್ ನಿವಾಸಿ ಚಿದಾನಂದ ಶೆಟ್ಟಿ ಮತ್ತು ಪ್ರೇಮಾ ಶೆಟ್ಟಿ ಇವರ ಪುತ್ರ.

ಈ ಸಂದರ್ಭದಲ್ಲಿ ಸಂಜಯ್ ಗ್ಲೋಬಲ್ ಫೌಂಡೇಶನ್ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿ ಹನೀಫ್ ವರ್ಷಾ, ಕೋಶಾಧಿಕಾರಿ ರಿಜ್ವಾನ್ ಬಿಕೆ, ಸಮಿತಿ ಸದಸ್ಯರಾದ ರಶೀದ್ ಬೆಳ್ತಂಗಡಿ, ಶರೀಫ್ ವೆಲ್ಕಮ್, ಇಸ್ಮಾಯಿಲ್ ಸಂಜಯ ನಗರ, ಶರೀಫ್ ಸಂಜಯ ನಗರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!