ಚಿಕ್ಕಮಗಳೂರು: ಸಾಂಬಾರ್ ಮಾಡಿಲ್ಲ ಅಂತ ತಂದೆ ಬೈದಿದ್ದಕ್ಕೆ ಪುತ್ರಿ ಆತ್ಮಹತ್ಯೆ
ಚಿಕ್ಕಮಗಳೂರು: ಸಾಂಬಾರ್ ಮಾಡಿಲ್ಲ ಅಂತ ಅಪ್ಪ ಬೈದಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ.
ಸೌಜನ್ಯ ಪೂಜಾರಿ (22) ಮೃತ ದುರ್ದೈವಿ. ಶನಿವಾರ ಬೆಳಗ್ಗೆ ತರಕಾರಿ ತಂದುಕೊಟ್ಟು ಸಾಂಬಾರ್ ಮಾಡುವಂತೆ ಯುವತಿಗೆ ಅಪ್ಪ ಹೇಳಿದ್ದರು. ಮಧ್ಯಾಹ್ನ ಊಟಕ್ಕೆ ಬಂದಾಗ ಮಗಳು ಸೌಜನ್ಯ ಸಾಂಬಾರ್ ಮಾಡಿರಲಿಲ್ಲ. ಸಾಂಬಾರ್ ಏಕೆ ಮಾಡಿಲ್ಲ ಎಂದು ಅಪ್ಪ ಬೈದಿದ್ದಾರೆ. ಮಗಳಿಗೆ ಬೈದ ಅಪ್ಪ ಸಾಂಬಾರ್ ತರಲು ಪಕ್ಕದ ಮನೆಗೆ ಹೋಗಿದ್ದರು. ಅಪ್ಪ ಬರುವಷ್ಟರಲ್ಲಿ ಸೌಜನ್ಯ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.





