ಉಡುಪಿ: ದೇವಸ್ಥಾನದ ಕಾಣಿಕೆ ಹುಂಡಿ ಕಳವು ಪ್ರಕರಣ: ಓರ್ವ ಆರೋಪಿ ಬಂಧನ
ಉಡುಪಿ: ಕಡ್ತಲ ಗ್ರಾಮದ ಭರ್ಭರೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಕಾಣಿಕೆ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ.
ವರಂಗ ಗ್ರಾಮ ಮಂಜಕ್ಯಾರು ನಿವಾಸಿ ರಾಘವೇಂದ್ರ ವಿ.ಕೆ(35) ಬಂಧಿತ ಆರೋಪಿಗಳು. ಈತನಿಂದ ಕಳವುಗೈದ 1000 ರೂ. ನಗದು ಹಣ ಮತ್ತು 25,000 ರೂ. ಮೌಲ್ಯದ ಬೈಕ್, 5ಸಾವಿರ ರೂ. ಮೌಲ್ಯದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಕಬ್ಬಿಣದ ಸ್ಪ್ಯಾನರ್‌ನ್ನು ವಶಪಡಿಸಿಕೊಳ್ಳಲಾಗಿದೆ.
ದೇವಸ್ಥಾನದ ಒಳಗೆ ಆವರಣದಲ್ಲಿರುವ ಭರ್ಭರೇಶ್ವರ, ಕೊಡಮಣಿ ತ್ತಾಯ, ನಾಗದೇವರ ಕಾಣಿಕೆ ಹುಂಡಿಯ ಬೀಗವನ್ನು ಮುರಿದು ಹುಂಡಿಯಲ್ಲಿದ್ದ 1,000ರೂ. ರೂ. ಕಾಣಿಕೆ ಹಣವನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.





