June 8, 2026

ಒಮ್ಮೆ ಭಾರತಕ್ಕೆ ಬಂದು ನೋಡಿ, ನಂತರ ಮಾತನಾಡಿ: ಭಾರತವನ್ನು ‘ನರಕ’ ಎಂದ ಟ್ರಂಪ್ ಗೆ ಇರಾನ್‌ನಿಂದ ತಿರುಗೇಟು

0
image_editor_output_image-1333913552-1777022029112.jpg

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಚೀನಾವನ್ನು “ನರಕದ ಕೂಪಗಳು” (Hellholes) ಎಂದು ಕರೆದಿರುವುದು ಜಾಗತಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಹಂಚಿಕೊಂಡ ವಿಡಿಯೋವೊಂದರಲ್ಲಿ ಜನ್ಮಸಿದ್ಧ ಪೌರತ್ವದ ಕುರಿತು ಮಾತನಾಡುತ್ತಾ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಇರಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತದ ಬೆಂಬಲಕ್ಕೆ ನಿಂತಿದೆ.

ಹೈದರಾಬಾದ್‌ನಲ್ಲಿರುವ ಇರಾನ್ ಕಾನ್ಸುಲೇಟ್ ಜನರಲ್ ಈ ಬಗ್ಗೆ ಎಕ್ಸ್ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿದ್ದು, “ಭಾರತ ಮತ್ತು ಚೀನಾ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಾಗರಿಕತೆಯ ತೊಟ್ಟಿಲುಗಳು. ಇಂತಹ ರಾಷ್ಟ್ರಗಳನ್ನು ಅವಮಾನಿಸುವುದು ಅಜ್ಞಾನಪೂರ್ಣ ಮತ್ತು ಅಸಮರ್ಪಕ ನಡೆ” ಎಂದು ಟೀಕಿಸಿದ್ದಾರೆ. ಅಲ್ಲದೆ, ನಿಜವಾದ ನರಕದ ಕೂಪವಿರುವುದು ಇತರ ದೇಶಗಳ ನಾಗರಿಕತೆ ನಾಶಪಡಿಸಲು ಬೆದರಿಕೆ ಹಾಕುವವರ ಬಳಿ ಎಂದು ಟ್ರಂಪ್ ಅವರನ್ನು ನೇರವಾಗಿ ಗುರಿಯಾಗಿಸಿ ಕಿಡಿಕಾರಿದ್ದಾರೆ.

ಇನ್ನಷ್ಟು ಅನ್ವೇಷಿಸಿ
ವೈಯಕ್ತಿಕ ರಕ್ಷಣಾ ಉಪಕರಣಗಳು
ಸುದ್ದಿ ಪತ್ರ
ವಿಶೇಷ ವರದಿ
ಪ್ರಾದೇಶಿಕ ಸುದ್ದಿ
ಚಲನಚಿತ್ರ ವಿಮರ್ಶೆ
ಮುಂಬೈನಲ್ಲಿರುವ ಇರಾನ್ ರಾಯಭಾರಿ ಅಧಿಕಾರಿಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಗಳುವ ವಿಡಿಯೋ ಹಂಚಿಕೊಳ್ಳುವ ಮೂಲಕ ಟ್ರಂಪ್‌ಗೆ ವಿಶೇಷ ಆಹ್ವಾನ ನೀಡಿದ್ದಾರೆ. “ಕಬಿ ಇಂಡಿಯಾ ಆಕೆ ದೇಖೋ, ಫಿರ್ ಬೋಲ್ನಾ” (ಒಮ್ಮೆ ಭಾರತಕ್ಕೆ ಬಂದು ನೋಡಿ, ನಂತರ ಮಾತನಾಡಿ) ಎಂದು ಹೇಳುವ ಮೂಲಕ ಭಾರತದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಈ ಬೆಳವಣಿಗೆಯು ಅಮೆರಿಕದ ಮುಂಬರುವ ಚುನಾವಣಾ ಪ್ರಚಾರದಲ್ಲಿ ಅಂತರಾಷ್ಟ್ರೀಯ ಸಂಬಂಧಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ರಾಜತಾಂತ್ರಿಕ ತಜ್ಞರು ವಿಶ್ಲೇಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!