May 31, 2026

ಕನ್ಯಾನ ಇಬ್ರಾಹೀಂ ಫೈಝಿ ಉಸ್ತಾದರ ಶಿಷ್ಯಂದಿರ ಸಂಘಟನೆ ಜಂಇಯ್ಯತು ತ್ತರ್ಬಿಯತಿಲ್ ಅನ್ಸಾರಿಯ್ಯ ವತಿಯಿಂದ ಸುಜ್ಞಾನ ಸಂಗಮ: ಶರೀಅತ್ ಗೆ ವಿರುದ್ಧವಾದ ಎಲ್ಲಾ ನಕಲಿ ತ್ವರೀಖತ್ ಗಳಿಂದ ದೂರವಿರಿ: ಪೇರೋಡ್ ಸಖಾಫಿ

0
IMG-20260415-WA0008.jpg

ವಿಟ್ಲ: ಇಸ್ಲಾಮಿನ ನಿಯಮಗಳು ಎಲ್ಲರಿಗೂ ಸಮಾನವಾಗಿದೆ. ಧರ್ಮದ ಹೆಸರಿನಲ್ಲಿ ಶೋಷಣೆ ಮಾಡುವ ಎಲ್ಲಾ ನಕಲಿ ತ್ವರೀಖತ್ ಗಳಿಂದ ದೂರ ಸರಿಯುವುದು ಸತ್ಯ ವಿಶ್ವಾಸಿಗಳ ಪಾಲಿಗೆ ಅನಿವಾರ್ಯ ಎಂದು ಖ್ಯಾತ ವಿದ್ವಾಂಸ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಹೇಳಿದರು..

ಅವರು ಕನ್ಯಾನ ಇಬ್ರಾಹೀಂ ಫೈಝಿ ಉಸ್ತಾದರ ದರ್ಸ್ ಸೇವೆಯ ನಲ್ವತ್ತನೇ ವರ್ಷ ಪ್ರಯುಕ್ತ ಶಿಷ್ಯಂದಿರ ಸಂಘಟನೆಯಾದ ಜಂಇಯ್ಯತು ತ್ತರ್ಬಿಯತಿಲ್ ಅನ್ಸಾರಿಯ್ಯ ವತಿಯಿಂದ ಹಮ್ಮಿಕೊಂಡಿದ್ದ ಸುಜ್ಞಾನ ಸಂಗಮ ಕಾರ್ಯಕ್ರಮದಲ್ಲಿ ತ್ವರೀಖತ್ ಎಂಬ ವಿಷಯದಲ್ಲಿ ಮಾತನಾಡಿದರು.

ಇಬ್ರಾಹೀಂ ಫೈಝಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವಾಲೆಮುಂಡೋವು ಮಹ್ಮೂದುಲ್ ಫೈಝಿ ಉದ್ಘಾಟಿಸಿದರು. ತೋಕೆ ಮುಹ್ಯುದ್ದೀನ್ ಕಾಮಿಲ್ ಸಖಾಫಿ, ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಪ್ರಮುಖರಾದ ಅಸ್ಸಯ್ಯಿದ್ ಶಿಹಾಬುದ್ದೀನ್ ಮದಕ ತಂಙಳ್, ಇಬ್ರಾಹೀಂ ಸಅದಿ ಮಾಣಿ, ಡಿಕೆ ಉಮರ್ ಸಖಾಫಿ, ಉಮರ್ ಮದನಿ ಮಚ್ಚಂಪಾಡಿ, ಇಬ್ರಾಹೀಂ ಮದನಿ ಕಂಬಳಬೆಟ್ಟು, ಹಾಫಿಳ್ ಅಹ್ಮದ್ ಶರೀಫ್ ಸಖಾಫಿ, ಯೂಸುಫ್ ಸಾಜಾ, ಯೂಸುಫ್ ಹಾಜಿ ಕೈಕಾರ, ಶಾಕಿರ್ ಹಾಜಿ, ಎಂಕೆ ಕುಂಞಿ ಹಾಜಿ ಕನ್ಯಾನ, ಡಿಕೆ ಇಬ್ರಾಹೀಂ ಕನ್ಯಾನ ಮೊದಲಾದವರು ಉಪಸ್ಥಿತರಿದ್ದರು.
ಮಜೀದ್ ಮುಸ್ಲಿಯಾರ್ ಅಳಿಕೆ ಸ್ವಾಗತಿಸಿದರು. ಖಾಸಿಂ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!