May 31, 2026

ನಿಟ್ಟೆ ಸಮೀಪದ ಬೋರ್ಗಲ್ಲುಗುಡ್ಡೆ ಎಂಬಲ್ಲಿ ಬಾವಿಗೆ ಬಿದ್ದಿದ್ದ ಚಿರತೆಯ ರಕ್ಷಣೆ

0
image_editor_output_image1937990438-1776246475695.jpg

ಕಾರ್ಕಳ: ಇಲ್ಲಿನ ನಿಟ್ಟೆ ಸಮೀಪದ ಬೋರ್ಗಲ್ಲುಗುಡ್ಡೆ ಎಂಬಲ್ಲಿ ಆವರಣ ಗೋಡೆಯಿಲ್ಲದ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯ ಮೂಲಕ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಹಾರದ ಅನ್ವೇಷಣೆಯಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆಯು, ಕತ್ತಲಿನಲ್ಲಿ ಬಾವಿಯ ತಡೆಗೋಡೆ ಇಲ್ಲದ ಕಾರಣ ಆಕಸ್ಮಿಕವಾಗಿ ಒಳಗೆ ಬಿದ್ದಿದೆ ಎನ್ನಲಾಗಿದೆ. ಮಂಗಳವಾರ ಮುಂಜಾನೆ ಬಾವಿಯೊಳಗೆ ಚಿರತೆ ಇರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದರು.

Leave a Reply

Your email address will not be published. Required fields are marked *

error: Content is protected !!