May 31, 2026

ಇರಾನ್, ಅಮೆರಿಕ ನಡುವಿನ ಕದನ ವಿರಾಮಕ್ಕೆ ಎರಡನೇ ಹಂತದ ಮಾತುಕತೆ: ಡೊನಾಲ್ಡ್ ಟ್ರಂಪ್

0
image_editor_output_image-1326861851-1776236826467.jpg

ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮಕ್ಕೆ ಸಂಬಂಧಿಸಿದ ಎರಡನೇ ಹಂತದ ಮಾತುಕತೆಗಳು ಮುಂದಿನ ಎರಡು ದಿನಗಳಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ತಿಳಿಸಿದ್ದಾರೆ.

ಆರಂಭದಲ್ಲಿ ವರದಿಗಾರರೊಂದಿಗೆ ಮಾತನಾಡಿದ್ದ ಟ್ರಂಪ್, ಎರಡನೇ ಹಂತದ ಮಾತುಕತೆಗಳು ಯುರೋಪ್‌ನ ಯಾವುದಾದರೂ ನಗರದಲ್ಲಿ ನಡೆಯಬಹುದು ಎಂದು ಹೇಳಿದ್ದರು. ಆದರೆ, ಅರ್ಧ ಗಂಟೆಯ ನಂತರ ಮತ್ತೆ ಕರೆ ಮಾಡಿದ ಅವರು, “ಮುಂದಿನ ಎರಡು ದಿನಗಳಲ್ಲಿ ಇಸ್ಲಾಮಾಬಾದ್‌ನಲ್ಲಿಯೇ ಏನಾದರೂ ಸಂಭವಿಸಬಹುದು, ನಾವು ಅಲ್ಲಿಗೇ ಹೋಗಲು ಹೆಚ್ಚು ಒಲವು ಹೊಂದಿದ್ದೇವೆ,” ಎಂದು ಸ್ಪಷ್ಟಪಡಿಸುವ ಮೂಲಕ ಪಾಕಿಸ್ತಾನವೇ ಮತ್ತೊಮ್ಮೆ ಈ ಮಹತ್ವದ ಸಭೆಗೆ ಆತಿಥ್ಯ ವಹಿಸಲಿದೆ ಎಂಬ ಸುಳಿವು ನೀಡಿದ್ದಾರೆ.

ಚಲನಚಿತ್ರ ಸ್ಮರಣಿಕೆಗಳು ಪೋಸ್ಟರ್‌ಗಳು
ಮಂಗಳೂರು ಶಾಪಿಂಗ್ ಮಾರ್ಗದರ್ಶಿ
ಇದೇ ವೇಳೆ ಇರಾನ್‌ನ ಪರಮಾಣು ಚಟುವಟಿಕೆಗಳ ಬಗ್ಗೆ ಅಮೆರಿಕವು 20 ವರ್ಷಗಳ ‘ಅಮಾನತು’ ಪ್ರಸ್ತಾವನೆಯನ್ನು ಮುಂದಿಟ್ಟಿದೆ ಎಂಬ ವರದಿಗಳ ಬಗ್ಗೆ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಎಂಬುದು ನನ್ನ ಮೊದಲಿನಿಂದಲೂ ಇರುವ ನಿಲುವು. ಹಾಗಾಗಿ ಕೇವಲ 20 ವರ್ಷಗಳ ಈ ಪ್ರಸ್ತಾವನೆ ನನಗಿಷ್ಟವಿಲ್ಲ,” ಎಂದು ಅವರು ‘ದಿ ನ್ಯೂಯಾರ್ಕ್ ಪೋಸ್ಟ್’ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!