ಬಿ.ಸಿ. ರೋಡ್ ತಲಪಾಡಿಯ ಡೈಮಂಡ್ ಇಂಟರ್ನ್ಯಾಷನಲ್ ಶಾಲೆಗೆ “ನ್ಯಾಷನಲ್ ಸ್ಕೂಲ್ ಅವಾರ್ಡ್” ಗೌರವ
ಬಿ.ಸಿ. ರೋಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡೈಮಂಡ್ ಇಂಟರ್ನ್ಯಾಷನಲ್ ಶಾಲೆಗೆ ಇತ್ತೀಚೆಗೆ ಬೆಂಗಳೂರಿನ ಯಲಹಂಕದಲ್ಲಿರುವ ರಮದ ಬೈ ವಿಂಡ್ಹ್ಯಾಮ್ (Wyndham) ನಲ್ಲಿ ನಡೆದ ಸಮಾರಂಭದಲ್ಲಿ “Most Socially Active School of 2026” ಪ್ರಶಸ್ತಿ ಲಭಿಸಿದೆ.
ಈ ಪ್ರಶಸ್ತಿಯನ್ನು ಕರ್ನಾಟಕ ಶಿಕ್ಷಣ ನೀತಿ ಮಂಡಳಿಯ ಪ್ರೊ. ಉರ್ಮಿ ಚಕ್ರವರ್ತಿ ಹಾಗೂ ನ್ಯಾಷನಲ್ ಸ್ಕೂಲ್ ಅವಾರ್ಡ್ ಅಸೋಸಿಯೇಷನ್‌ನ ಸಂಸ್ಥಾಪಕ ಸದಸ್ಯೆಯಾದ ಶ್ರೀಮತಿ ಶಿಖಾ ದಿಲ್ಲನ್ ಅವರು, ಶಾಲೆಯ ಟ್ರಸ್ಟಿಗಳಾದ ಸಲೀಂ ಅಲ್ತಾಫ್ ಮತ್ತು ಸನ ಅಲ್ತಾಫ್ ಅವರಿಗೆ ಪ್ರದಾನ ಮಾಡಿದರು.
ಬಿ.ಸಿ. ರೋಡ್ ತಲಪಾಡಿ ಪ್ರದೇಶದಲ್ಲಿ ಕಳೆದ 11 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಡೈಮಂಡ್ ಇಂಟರ್ನ್ಯಾಷನಲ್ ಶಾಲೆಯು ಸಿಬಿಎಸ್ಇ (CBSE) ಪಠ್ಯಕ್ರಮದೊಂದಿಗೆ ಇಸ್ಲಾಮಿಕ್ ಶಿಕ್ಷಣ ಹಾಗೂ ವಿವಿಧ ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ ಒತ್ತು ನೀಡುತ್ತಾ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ.




