ವಿಟ್ಲ ಪ.ಪಂ ಚುನಾವಣೆ ಫಲಿತಾಂಶ: 13ನೇ ವಾರ್ಡ್ ನಲ್ಲಿ ಎಸ್ ಡಿ ಪಿ ಐ ಶಾಕೀರ ಅವರಿಗೆ ಗೆಲುವು
ವಿಟ್ಲ: ಪಟ್ಟಣ ಪಂಚಾಯಿತಿಯ 13ನೇ ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷದ ಎಸ್ ಡಿ ಪಿ ಐ ಶಾಕೀರ ಗೆಲುವು ಸಾಧಿಸಿದ್ದಾರೆ.
ಡಿ.27ರಂದು ವಿಟ್ಲ ಪಟ್ಟಣ ಪಂಚಾಯತ್ ನ 18 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಶೇ. 73.56 ಮತದಾನವಾಗಿತ್ತು.
ಇಂದು ಬಂಟ್ವಾಳದ ದೀಪಿಕಾ ಪ್ರೌಢ ಶಾಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಒಂದೊಂದು ವಾರ್ಡ್ ಗಳ ಫಲಿತಾಂಶ ಹೊರಬೀಳುತ್ತಿದೆ.
ಇದೀಗ 13ನೇ ವಾರ್ಡ್ ನ ಮತ ಎಣಿಕೆ ಪೂರ್ತಿಗೊಂಡಿದ್ದು, ಎಸ್ ಡಿ ಪಿ ಐ ಪಕ್ಷದ ಶಾಕಿರ ಅವರು ಗೆಲುವು ಸಾಧಿಸಿದ್ದಾರೆ.




