ಹೆಬ್ರಿ: ಏಣಿಯಿಂದ ಆಯತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿ ಮೃತ್ಯು
ಹೆಬ್ರಿ: ಏಣಿಯಿಂದ ಆಯತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿರ್ವ ಮೃತಪಟ್ಟ ಘಟನೆ ಹೆಬ್ರಿ ಹುತುರ್ಕೆ ಎಂಬಲ್ಲಿ ನಡೆದಿದೆ.
ಮೃತರನ್ನು ಹೆಬ್ರಿ ತಾಲೂಕಿನ ಬೇಳಂಜೆ ನಿವಾಸಿ ಸಾತ್ವಿಕ್ ಎಂದು ಗುರುತಿಸಲಾಗಿದೆ, ಈತ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ರಜೆಯಲ್ಲಿ ತನ್ನ ವಿದ್ಯಾಭ್ಯಾಸಕ್ಕೂ, ಮನೆಯ ಖರ್ಚಿಗೂ ಸಹಾಯವಾಗಲಿ ಎಂಬ ಉದ್ದೇಶದಿಂದ ಕೆಲಸಕ್ಕೆ ಹೋಗಿದ್ದರು. ಆದರೆ ಹೆಬ್ರಿ ಹುತುರ್ಕೆ ಎಂಬಲ್ಲಿ ಕೆಲಸ ಮಾಡುವಾಗ ಏಣಿಯಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




