ಸುಳ್ಯ ಡಿಗ್ರಿ ಕಾಲೇಜಿನ ಪ್ರಾಧ್ಯಾಪಕ ಕುಸಿದು ಬಿದ್ದು ಸಾವು
ಸುಳ್ಯ: ಸುಳ್ಯ ಡಿಗ್ರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಮಂಜು ಪಿ. (42) ಅವರು ಗುರುವಾರ (ಮಾರ್ಚ್ 12) ಮಧ್ಯಾಹ್ನ ಮೆಡಿಕಲ್ ಶಾಪ್ ಬಳಿ ಕುಸಿದು ಬಿದ್ದು ಅಕಾಲಿಕ ನಿಧನರಾಗಿದ್ದಾರೆ. ಮೃತರು ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಬೇರ್ಯ ನಿವಾಸಿಯಾಗಿದ್ದರು.
ಗುರುವಾರ ಎಂದಿನಂತೆ ಕಾಲೇಜಿಗೆ ಹಾಜರಾಗಿ ಮಧ್ಯಾಹ್ನದವರೆಗೆ ತರಗತಿಗಳನ್ನು ನಡೆಸಿದ್ದ ಮಂಜು ಅವರಿಗೆ, ನಂತರ ಅಸೌಖ್ಯ ಕಾಣಿಸಿಕೊಂಡಿತ್ತು. ವಿದ್ಯಾರ್ಥಿಯೊಬ್ಬರ ಸಹಾಯದಿಂದ ತಮ್ಮ ಕೊಠಡಿಗೆ ತೆರಳಿ ವಿಶ್ರಾಂತಿ ಪಡೆಯುವುದಾಗಿ ತಿಳಿಸಿದ್ದರು.
ಆದರೆ, ಸ್ವಲ್ಪ ಸಮಯದ ನಂತರ ಔಷಧ ಪಡೆಯಲು ಸುಳ್ಯದ ಶ್ರೀರಾಮ ಪೇಟೆಯ ಮೆಡಿಕಲ್ ಶಾಪ್‌ಗೆ ಬಂದಾಗ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.




