April 24, 2026

ಡೊನಾಲ್ಡ್ ಟ್ರಂಪ್ ಒಬ್ಬ ಸರ್ವಧಿಕಾರಿ, ನರೇಂದ್ರ ಮೋದಿ  ಅವರ ಗುಲಾಮ: ಮಲ್ಲಿಕಾರ್ಜುನ ಖರ್ಗೆ

0
image_editor_output_image-152002181-1773013168543.jpg

ಕಲಬುರಗಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಡಿಕ್ಟೇಟರ್, ಪ್ರಧಾನಿ ನರೇಂದ್ರ ಮೋದಿ ಅವರ ಗುಲಾಮರಂತೆ ನಡೆದುಕೊಳ್ಳುತ್ತಿದ್ದಾರೆ. ನಮ್ಮನ್ನು ಮತ್ತೆ ಗುಲಾಮಗಿರಿಗೆ ತಳ್ಳುತ್ತಿದ್ದಾರೆ. ರಷ್ಯಾದಿಂದ ಈಗ ಒಂದು ತಿಂಗಳ ಮಾತ್ರ ತೈಲ ಖರೀದಿಗೆ ಅಮೆರಿಕ ಅನುಮತಿ ನೀಡಿದೆ. ಅಮೆರಿಕದವರು ಹೇಳಿದಂತೆ ಮೋದಿ ಕೇಳುತ್ತಿದ್ದಾರೆ. ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ನಮ್ಮ ದೇಶವನ್ನು ಗಿರಿವಿ ಇಟ್ಟಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ವಾಗ್ದಾಳಿ ಮಾಡಿದ್ದಾರೆ.

ಅಮೆರಿಕಾಗೆ ಗುಲಾಮರನ್ನ ಮಾಡುತ್ತಿದ್ದಿರಿ
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಟ್ರಂಪ್ ನನ್ನ ಸ್ನೇಹಿತ ಅಂತಾ ಪ್ರಧಾನಿ ಮೋದಿ ಹೇಳುತ್ತಾರೆ. ಟ್ರಂಪ್ ಅತಿ ಹೆಚ್ಚು ಟ್ಯಾಕ್ಸ್ ನಮ್ಮ ಮೇಲೆ ಹಾಕುತ್ತಿದ್ದಾರೆ. ಖಮೇನಿ ಹತ್ಯೆ ಮಾಡಿದರೆ ವಿಶ್ವ ಹೇಗೆ ಸುರಕ್ಷಿತ ಆಗುತ್ತೆ? ನೀವು ಎಲ್ಲರನ್ನೂ ಕೊಲ್ಲುತ್ತಾ ಹೋದರೆ ಎಲ್ಲಿ ಶಾಂತಿ ಬರುತ್ತೆ. ಅಮೆರಿಕ ಜೊತೆಗೂಡಿ ನಮ್ಮ ದೇಶವನ್ನು ಹಾಳು ಮಾಡುತ್ತಿದ್ದೀರಿ. ನೀವು ಸ್ವಾಭಿಮಾನ ಬೆಳೆಸಿಕೊಳ್ಳಿ. ಬ್ರಿಟಿಷರನ್ನ ಒದ್ದು ಓಡಿಸಿದ್ದೆವು. ಅಮೆರಿಕಾಗೆ ಗುಲಾಮರನ್ನ ಮಾಡುತ್ತಿದ್ದಿರಿ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!