ಮಂಗಳೂರು ಜನರೇ ಎಚ್ಚರ: ಶಕ್ತಿನಗರ, ಕದ್ರಿ, ಮಂಗಳೂರು ಹಿಲ್ಸ್ ಪರಿಸರದಲ್ಲೂ ಕಾಣಿಸಿಕೊಂಡ ಚಿರತೆ
ಮಂಗಳೂರು: ಒಂದೇ ಕಡೆ 3 ಚಿರತೆ ಪತ್ತೆಯಾಗಿದ್ದು, ಸಹಜವಾಗಿಯೇ ನಾಗರಿಕರು ಆತಂಕಗೊಂಡಿದ್ದಾರೆ.
ಕೆಲದಿನಗಳ ಹಿಂದೆ ಶಕ್ತಿನಗರ, ಕದ್ರಿ ಪರಿಸರದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇದೀಗ ಮಂಗಳೂರು ಹಿಲ್ಸ್ ಭಾಗದಲ್ಲೂ ಕಾಣಿಸಿಕೊಂಡಿದೆ. ಸಂಜೆ ಹೊತ್ತಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಈ ಭಾಗದಲ್ಲಿ ಶಾಲಾ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದು, ಭೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ.




