February 4, 2026

‘ಬಚ್ಪನ್ ಕಾ ಪ್ಯಾರ್’ ವೈರಲ್ ವೀಡಿಯೊದ ಹುಡುಗನಿಗೆ ಅಪಘಾತ:
ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ

0
pjimage-138.jpg

ಛತ್ತೀಸ್ಗಢ: ‘ಬಚ್‌ಪನ್ ಕಾ ಪ್ಯಾರ್’ ಹಾಡಿನಿಂದ, ರಾತ್ರೋರಾತ್ರಿ ಖ್ಯಾತನಾಗಿದ್ದ, ಸಹದೇವ್ ದಿರ್ಡೊ ಎಂಬ ಬಾಲಕ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಸವಾರಿ ಮಾಡುತ್ತಿದ್ದ ಮೋಟಾರ್‌ಸೈಕಲ್ ಸ್ಕಿಡ್ ಆಗಿ ಅಪಘಾತಕ್ಕೀಡಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆ 6:30 ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಹೆಲ್ಮೆಟ್ ಧರಿಸದೇ ಇದ್ದ ಸಹದೇವ್ ದಿರ್ಡೋ ನ ತಲೆಗೆ ಗಾಯಗಳಾಗಿದ್ದು, ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಶರ್ಮಾ ತಿಳಿಸಿದ್ದಾರೆ.

ಬಾಲಕನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಜಗದಲ್‌ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.
ಅಪಘಾತದ ಬಗ್ಗೆ ಮಾಹಿತಿ ತಿಳಿದ ಸುಕ್ಮಾ ಜಿಲ್ಲಾಧಿಕಾರಿ ವಿನೀತ್ ನಂದನವರ್ ಮತ್ತು ಸುನೀಲ್ ಶರ್ಮಾ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ 10 ವರ್ಷದ ಮಗುವಿನ ಸ್ಥಿತಿಯ ಬಗ್ಗೆ ವಿಚಾರಿಸಿದರು.

ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಬಾಲಕನಿಗೆ ಸಾಧ್ಯವಾದಷ್ಟು ಬೇಗ ಉತ್ತಮ ವೈದ್ಯಕೀಯ ನೆರವು ನೀಡುವಂತೆ ಶ್ರೀ ನಂದನ್ವಾರ್ ಅವರಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ರಾಜ್ಯದ ಬುಡಕಟ್ಟು ಪ್ರಾಬಲ್ಯ ಮತ್ತು ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯ ಸಹದೇವ್ ದಿರ್ಡೊ ಈ ವರ್ಷದ ಆರಂಭದಲ್ಲಿ ಶಾಲಾ ಸಮವಸ್ತ್ರದಲ್ಲಿ ‘ಬಚ್‌ಪನ್ ಕಾ ಪ್ಯಾರ್’ ಹಾಡುವ ವೀಡಿಯೊ ವೈರಲ್ ಆದ ನಂತರ ಇಂಟರ್ನೆಟ್ ಸೆನ್ಸೇಷನ್ ಆಗಿದ್ದನು.

ಈ ವೀಡಿಯೊವನ್ನು 2019 ರಲ್ಲಿ ಅವರ ಶಾಲೆಯ ಶಿಕ್ಷಕರು ಅವರ ತರಗತಿಯೊಳಗೆ ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ. ವೈರಲ್ ಆದ ನಂತರ ಬಾಲಕನು ಹಾಡಿನ ಹೊಸ ಆವೃತ್ತಿಯಲ್ಲಿ ರಾಪರ್ ಬಾದ್‌ಶಾ ಅವರೊಂದಿಗೆ ಕಾಣಿಸಿಕೊಂಡನು, ಅದರ ವೀಡಿಯೊವನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!