ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆ
ಬಂಟ್ವಾಳ: ಪಾಣೆಮಂಗಳೂರು ಸಮೀಪ ಕಂಚಿಕಾರಪೇಟೆ ಬಳಿ ನೇತ್ರಾವತಿ ನದಿಯಲ್ಲಿ ಗುರುವಾರ ಸಂಜೆ ಮೃತದೇಹವೊಂದು ಪತ್ತೆಯಾಗಿದೆ.
ವೀರಕಂಭ ಗ್ರಾಮದ ಬಾಯಿಲ ನಿವಾಸಿ ಪ್ರಕಾಶ್ (35) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಂಚಿಕಾರಪೇಟೆ ಸೇತುವೆ ಬಳಿ ನದಿ ಮಧ್ಯೆ ತೇಲಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದು, ಕೂಡಲೇ ದೋಣಿ ಸಹಾಯದಿಂದ ಸ್ಥಳೀಯರ ನೆರವಿನಿಂದ ದಡಕ್ಕೆ ತರಲಾಯಿತು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.




