March 18, 2026

ಶಿವಮೊಗ್ಗ: ಧರೆಗೆ ಗುದ್ದಿದ ಖಾಸಗಿ ಬಸ್: ಮಗು ಸಾವು

0
image_editor_output_image557390398-1767083858273.jpg

ಹೊಸನಗರ: ನಿಯಂತ್ರಣ ತಪ್ಪಿ ಖಾಸಗಿ ಬಸ್ ಧರೆಗೆ ಗುದ್ದಿದ ಪರಿಣಾಮ ಮಗು ಅಸುನೀಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ನಲ್ಲಿ ನಡೆದಿದೆ.

ಒಂದೂವರೆ ವರ್ಷದ ಮಗು ಮೃತಪಟ್ಟಿದ್ದರೆ, ಘಟನೆಯಲ್ಲಿ 10 ಜನರಿಗೆ ಗಂಭೀರ ಗಾಯವಾಗಿದೆ. ಬಸ್ ದಾವಣಗೆರೆಯಿಂದ ಮಂಗಳೂರು ಕಡೆ ಹೋಗುತ್ತಿತ್ತು ಎನ್ನಲಾಗಿದ್ದು, ಘಟನೆ ಸಂಬಂಧ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ದುರ್ಗಾಂಬ ಸಂಸ್ಥೆಯ ಬಸ್‌ ಹುಲಿಕಲ್‌ ಘಾಟಿಯಲ್ಲಿ ಧರೆಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಗು ಸಾವನ್ನಪ್ಪಿದೆ. ಶರೀಫಾ ಬಿ (57) , ಇಮಾಮ್‌ ಸಾಬ್‌ (73), ಸಫಾನ (28) ಎಂಬುವವರು ಗಾಯಗೊಂಡಿದ್ದಾರೆ. ಅವರನ್ನು ಉಡುಪಿಯ ಆದರ್ಶನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!