ಮಂಗಳೂರಿನಲ್ಲಿ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ, ಪರಿಶೀಲನೆ
ಮಂಗಳೂರು: ಮಂಗಳೂರಿನಲ್ಲಿ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರಾಗೃಹ ಇಲಾಖೆ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಮಂಗಳೂರು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಂಗಳೂರು ಕಾರಾಗೃಹಕ್ಕೆ ಔಪಚಾರಿಕವಾಗಿ ಬಂದು ಭೇಟಿ ಕೊಟ್ಟಿದ್ದೇನೆ.
ರಾಜ್ಯದಲ್ಲಿ 54 ಕಾರಾಗೃಹಗಳು ಇದೆ. ಎಲ್ಲಾ ಕಾರಾಗೃಹವನ್ನು ಸಮಯಕ್ಕೆ ಸರಿಯಾಗಿ ನೋಡಬೇಕು ಎಂದರು.
ಮಂಗಳೂರು ಸೂಕ್ಷ್ಮ ಕಾರಾಗೃಹ ಈಗಾಗಲೇ ಇಲ್ಲಿ ರೈಡ್ ಗಳನ್ನು ಮಾಡಲಾಗಿದೆ. ಒಳಗಡೆ ಗಲಾಟೆ ಮಾಡಿದ ಖೈದಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ಇನ್ನೊಂದಿಷ್ಟು ಖೈದಿಗಳನ್ನು ಬೇರೆ ಜಾಗಕ್ಕೆ ಕಳುಹಿಸುತ್ತೇವೆ. ಒಳ್ಳೆಯ ನಡತೆ ಹೊಂದಿರುವವರಿಗೆ ಸಹಕಾರ ಕೊಡ್ತೇವೆ ಎಂದರು.
ಜೈಲಿಗೆ ಯಾವ ರೀತಿ ನಿಷೇಧಿತ ವಸ್ತುಗಳು ಬರ್ತಿದೆ ಎಂದು ಚರ್ಚೆ ಮಾಡ್ತೇವೆ. ಟ್ರಯಲ್ ಬೇಸಿಸ್ ಮೇಲೆ ಎಐ ಟೆಕ್ನಾಲಜಿ ಬಳಕೆ ಮಾಡ್ತಿದ್ದೇವೆ. ಎಷ್ಟು ಪರಿಣಾಮಕಾರಿ ಆಗುತ್ತೆ ಎಂದು ನೋಡಿ ಅಳವಡಿಕೆ ಮಾಡ್ತೇವೆ ಎಂದರು ಸದ್ಯ ಪರಪ್ಪನ ಅಗ್ರಹಾರ, ಮೈಸೂರು ಜೈಲಿನಲ್ಲಿ ಎಐ ಕ್ಯಾಮರಾ ಟ್ರಯಲ್ ಆಗಿದೆ. ಮಂಗಳೂರು ಜೈಲಿನಲ್ಲಿಯೂ ಬೇಕಾದ್ರೆ ಟ್ರಯಲ್ ಮಾಡ್ತೀವಿ ಎಂದರು.ಮಂಗಳೂರು ಪ್ರವಾಸ
ಇನ್ನೂ ಮಂಗಳೂರು ಜಾಮರ್ ಸಮಸ್ಯೆಯನ್ನು ಹದಿನೈದು ವರ್ಷದಿಂದ ಕೇಳ್ತಾ ಇದ್ದೇನೆ. ಕಾಲ ಕಾಲಕ್ಕೆ ಬದಲಾವಣೆ ಆಗಿದೆ. ಆದ್ರೆ ಇನ್ನು ಸಹ ಕೆಲ ಸಮಸ್ಯೆಗಳು ಇದೆ. ನಿನ್ನೆ ಒಂದು ಮೊಬೈಲ್ ಫೋನ್ ಮಂಗಳೂರು ಜೈಲಿನಲ್ಲಿ ಸಿಕ್ಕಿದೆ. ಮುಂದೆಯು ಪೊಲೀಸರು ಸಹ ವಿಸಿಟ್ ಮಾಡ್ತಾರೆ. ಜೈಲು ಕಂಟ್ರೋಲ್ ಮಾಡಿದ್ರೆ 60% ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತೆ. ದೊಡ್ಡ ದೊಡ್ಡ ತರ್ಲೆ ಮಾಡೋರು ಇಲ್ಲಿಗೆ ಬರ್ತಾರೆ. ಜಾಮೀನು ಮೇಲೆ ಹೊರಗೆ ಬರ್ತಾರೆ. ಇಲ್ಲಿ ನಾವು ಕಂಟ್ರೋಲ್ ಅಲ್ಲಿ ಇಟ್ಟರೆ ಸರಿ ಆಗುತ್ತೆ ಎಂದರು,




