March 18, 2026

ಪಡುಬಿದ್ರಿ: ಟೆಂಪೊ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತ್ಯು

0
image_editor_output_image-33143214-1764504036791.jpg

ಪಡುಬಿದ್ರಿ: ಟೆಂಪೊ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರೇಕ್ಷಾ (22) ದುರ್ಮರಣ ಹೊಂದಿರುವ ದಾರುಣ ಘಟನೆ ಪಡುಬಿದ್ರಿ ಸಮೀಪ ನಡೆದಿದೆ.

ಅವರು ವಾಮಂಜೂರು ಕರಾವಳಿ ಕಾಲೇಜಿನ ಅಂತಿಮ ವರ್ಷದ ಡಿ ಫಾರ್ಮ್ ವಿದ್ಯಾರ್ಥಿನಿಯಾಗಿದ್ದರು. ಮೃತರು ತಾಯಿ ಮತ್ತು ಹಿರಿಯ ಸಹೋದರನನ್ನು ಅಗಲಿದ್ದಾರೆ. ನಾಲು ಬಿಲ್ಲಿ ತೋಟ ನಿವಾಸಿಯಾದ ಪ್ರೇಕ್ಷಾ ವಾಮಂಜೂರು ಕರಾವಳಿ ಕಾಲೇಜಿನ ವಿದ್ಯಾರ್ಥಿನಿ.

ಕಾಲೇಜಿನ ಪರೀಕ್ಷೆ ಮುಗಿಸಿ ಮನೆಯತ್ತ ಮರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಮಂಗಳೂರು ದಿಕ್ಕಿಗೆ ಸೇರುವ ಸರ್ವಿಸ್ ರಸ್ತೆಯಲ್ಲಿ ನಿಂತಿದ್ದ ಬಸ್ಸನ್ನು ಗಮನಿಸುತ್ತಾ ರಸ್ತೆ ದಾಟುತ್ತಿದ್ದ ವೇಳೆ ಉಡುಪಿ ದಿಕ್ಕಿನಿಂದ ವೇಗವಾಗಿ ಬಂದ ನಂದಿನಿ ಸಾಮಾನು ಸಾಗಿಸುವ ಗೂಡ್ಸ್‌ ಟೆಂಪೊ ನೇರವಾಗಿ ಅಪ್ಪಳಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!