March 19, 2026

ಬೆಳ್ತಂಗಡಿ: ಬೈಕ್, ಕಾರಿನ ನಡುವೆ ಅಪಘಾತದಲ್ಲಿ: ಬೈಕ್ ಸವಾರ ಸಾವು

0
image_editor_output_image-1404222906-1761800615896.jpg

ಬೆಳ್ತಂಗಡಿ: ಬೈಕ್ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ಸ್ಪಂಧಿಸಿದೆ ಸಾವನಪ್ಪಿದ ಘಟನೆ ನಡೆದಿದೆ.

ಮೃತರನ್ನು ನಾವೂರು ಗ್ರಾಮದ ಹೊಡಿಕ್ಕಾರು ನಿವಾಸಿ ಚಂದ್ರಹಾಸ (28) ಎಂದು ಗುರುತಿಸಲಾಗಿದೆ. ಉಜಿರೆ-ಧರ್ಮಸ್ಥಳ ರಸ್ತೆಯ ಕನ್ಯಾಡಿ ಸೇವಾಧಾಮದ ಬಳಿ ಈ ಅಪಘಾತ ಸಂಭವಿಸಿದೆ.

ಟೈಲ್ಸ್ ಅಳವಡಿಕೆಯ ಕೆಲಸ ಮಾಡುತ್ತಿರುವ ಅವರು ಬುಧವಾರ ಬೆಳಗ್ಗೆ ಧರ್ಮಸ್ಥಳ ಕಡೆಗೆ ಕೆಲಸಕ್ಕೆ ಹೋಗುತ್ತಿರುವಾಗ ಎದುರಿನಿಂದ ಕಾರು ಆಗಮಿಸಿ ಮುಖಾಮುಖಿ ಢಿಕ್ಕಿ ಸಂಭವಿಸಿತ್ತು. ಚಂದ್ರಹಾಸ ಅವರ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿತ್ತು. ಅವರನ್ನು ಉಜಿರೆ ಆಸ್ಪತ್ರೆಗೆ ಸಾಗಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮಂಗಳೂರು ಪ್ರವಾಸ

ಘಟನೆಯ ಕುರಿತು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಂದ್ರಹಾಸ್ ಅವರು ವೃದ್ಧ ತಂದೆ-ತಾಯಿಗೆ ಏಕೈಕ ಪುತ್ರನಾಗಿದ್ದು, ಇಬ್ಬರು ಸಹೋದರಿಯರಿಗೆ ವಿವಾಹವಾಗಿದೆ. ಅವಿವಾಹಿತರಾಗಿದ್ದ ಚಂದ್ರಹಾಸ ಮನೆಯ ಆಧಾರಸ್ತಂಭವಾಗಿದ್ದರು. ಇದೀಗ ಅವರ ಅಗಲುವಿಕೆಯಿಂದ ಕುಟುಂಬದ ಆಧಾರವೇ ಕಳಚಿದಂತಾಗಿದೆ.

Leave a Reply

Your email address will not be published. Required fields are marked *

error: Content is protected !!