February 1, 2026

ಮಹಿಳಾ ಡಾಕ್ಟರ್ ಆತ್ಮಹತ್ಯೆ ಪ್ರಕರಣ: ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಇಬ್ಬರು ಅರೆಸ್ಟ್

0
image_editor_output_image-659742553-1761557068175.jpg

ಮುಂಬೈ: ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಡಾಕ್ಟರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಬಣಕಾರ್‌ ಮತ್ತು ಪ್ರಕರಣ ಪ್ರಮುಖ ಆರೋಪಿ ಪಿಎಸ್‌ಐ ಗೋಪಾಲ್ ಬದಾನೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಫಾಲ್ತಾನ್‌ನಲ್ಲಿ 26 ವರ್ಷದ ಮಹಿಳಾ ಡಾಕ್ಟರ್ ಏಳು ಸಾಲಿನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಬನಾಡೆ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ತನ್ನ ಜಮೀನುದಾರನ ಮಗ ಪ್ರಶಾಂತ್ ಬಣಕಾರ್ ಕಿರುಕುಳ ಮತ್ತು ಚಿತ್ರಹಿಂಸೆ ನೀಡಿರುವುದಾಗಿ ಆರೋಪಿಸಿದ್ದಾರೆ. ಇಬ್ಬರೂ ನಾಲ್ಕು ತಿಂಗಳ ಕಾಲ ಮಾನಸಿಕವಾಗಿ ಹಿಂಸಿಸುತ್ತಿದ್ದರು ಎಂದೂ ಆಕೆ ಹೇಳಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನಾ ಆಕೆ ಪ್ರಶಾಂತ್ ಬಣಕಾರ್ ಜೊತೆ ಮಾತನಾಡಿರುವುದು ವರದಿಯಾಗಿದೆ.

ಘಟನೆ ಕುರಿತು ಸಾರ್ವಜನಿಕ ಆಕ್ರೋಶ ಭುಗಿಲೆದ್ದ ನಂತರ ಸತಾರಾ ಜಿಲ್ಲಾ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದರು. ಅದರಲ್ಲಿ ಒಂದು ತಂಡವು ಶನಿವಾರ ಬೆಳಿಗ್ಗೆ ಸತಾರಾದಲ್ಲಿರುವ ಸ್ನೇಹಿತನ ಫಾರ್ಮ್‌ಹೌಸ್‌ನಿಂದ ಪ್ರಶಾಂತ್ ಬಣಕರ್‌ನನ್ನು ಬಂಧಿಸಿದೆ. ಬಳಿಕ ಪ್ರಮುಖ ಆರೋಪಿ ಪಿಎಸ್ಐ ಗೋಪಾಲ್ ಬದನೆ ಯನ್ನು ಅರಸ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!