March 19, 2026

ಸಕಲೇಶಪುರ: 100 ಅಡಿ ಆಳದ ಹಳ್ಳಕ್ಕೆ ಬಿದ್ದ ಕಾರು: ರಸ್ತೆ ತಡೆಗೋಡೆ ನಿರ್ಮಿಸುವಂತೆ ಸಾರ್ವಜನಿಕರ ಆಗ್ರಹ

0
image_editor_output_image-97058921-1761389622981.jpg

ಸಕಲೇಶಪುರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 100 ಅಡಿ ಆಳದ ಹಳ್ಳಕ್ಕೆ ಬಿದ್ದ ಘಟನೆ ಸಕಲೇಶಪುರ ತಾಲೂಕಿನ ಶಿರಾಡಿ ರಸ್ತೆಯ ಮಾರನಹಳ್ಳಿಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.

ಶಿವಮೊಗ್ಗದ ಶಿಕ್ಷಕ ಗೋವಿಂದ ನಾಯ್ಕ ಎಂಬವರಿಗೆ ಸೇರಿದ ಕಾರು ಇದಾಗಿದೆ. ಗೋವಿಂದ ನಾಯ್ಕ ಅವರು ಪತ್ನಿ ಇಬ್ಬರು ಮಕ್ಕಳೊಂದಿಗೆ ಶಿವಮೊಗ್ಗದಿಂದ ಬೆಳ್ತಂಗಡಿಯ ಗುರುವಾಯನಕೆರೆಯ ನವೋದಯ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇವರಿದ್ದ ಕಾರು ಮಾರನಹಳ್ಳಿಯಲ್ಲಿ ನ್ಯೂ ಸ್ಟಾರ್ ಹೋಟೆಲ್ ಬಳಿ ತಲುಪಿದಾಗ ತಡೆಗೋಡೆ ಇಲ್ಲದ ರಸ್ತೆ ಬದಿಯಿಂದ ಹಳ್ಳಕ್ಕೆ ಉರುಳಿಬಿದ್ದಿದೆ.

ಸುಮಾರು 100 ಅಡಿ ಆಳದ ಹಳ್ಳಕ್ಕೆ ಕಾರು ಬಿದ್ದರೂ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳು ಆಗಿವೆ. ಇಲ್ಲಿ ತಡೆಗೋಡೆ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!