ಬ್ರಹ್ಮಾವರ: ಬೈಕ್ ಢಿಕ್ಕಿಯಾಗಿ ಚಿರತೆ ಸಾವು, ಸವಾರ ಗಂಭೀರ
ಬ್ರಹ್ಮಾವರ : ಬೈಕ್ ಡಿಕ್ಕಿಯಾಗಿ ಚಿರತೆ ಸಾವನ್ನಪ್ಪಿದ್ದು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂಚಾರ್ ನಲ್ಲಿ ಸಂಭವಿಸಿದೆ.
ಚಿರತೆಯೊಂದು ಚಲಿಸುತ್ತಿದ್ದ ಬೈಕ್ ಗೆ ಅಡ್ಡ ಬಂದ ಪರಿಣಾಮ ಸವಾರ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ. ಭಾಸ್ಕರ್ ಶೆಟ್ಟಿ ಗಂಭೀರ ಗಾಯಗೊಂಡ ಬೈಕ್ ಸವಾರ.
ಭಾಸ್ಕರ್ ಶೆಟ್ಟಿ ರಾತ್ರಿ ತನ್ನ ಬೈಕ್‌ನಲ್ಲಿ ಮನೆಯತ್ತ ಸಾಗುತ್ತಿದ್ದರು. ಈ ವೇಳೆ ಒಮ್ಮೆಲೇ ಚಿರತೆಯೊಂದು ಅಡ್ಡ ಬಂದಿದೆ.
ಪರಿಣಾಮ ಸವಾರನ ನಿಯಂತ್ರಣ ತಪ್ಪಿ ಚಿರತೆಗೆ ಡಿಕ್ಕಿ ಹೊಡೆದು ಬೈಕ್ ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಿರತೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದೆ. ಭಾಸ್ಕರ್ ಗಂಭೀರ ಗಾಯಗೊಂಡಿದ್ದಾರೆ.
ಅವರನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಹೆಬ್ರಿ ಅರಣ್ಯ ಇಲಾಖೆಯವರು ಸ್ಥಳಕ್ಕಾಗಮಿಸಿ, ಮೃತಪಟ್ಟ ಚಿರತೆಯನ್ನು ಪರಿಶೀಲಿಸಿದ್ದಾರೆ. ಘಟನೆಯ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




