ಚಿಕಿತ್ಸೆ ಪಡೆಯಲು ಬಂದ ಯುವತಿಗೆ ಲೈಂಗಿಕ ಕಿರುಕುಳ: ವೈದ್ಯನ ಬಂಧನ
ಬೆಂಗಳೂರು: ಚಿಕಿತ್ಸೆ ಪಡೆಯಲು ಬಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಚರ್ಮರೋಗ ತಜ್ಞ ಅರೆಸ್ಟ್ ಆಗಿರುವ ಘಟನೆ ಬೆಂಗಳೂರಿನ ಖಾಸಗಿ ಕ್ಲಿನಿಕ್‌ನಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಪ್ರವೀಣ್ ರೋಡ್ರಿಗಸ್ ಎಂದು ಗುರುತಿಸಲಾಗಿದ್ದು, ಚರ್ಮರೋಗ ತಜ್ಞನಾಗಿದ್ದ ಎಂದು ತಿಳಿದುಬಂದಿದೆ.
ಈ ಸಂಬಂಧ 21 ವರ್ಷದ ಯುವತಿ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚರ್ಮದ ಸೋಂಕು ಸಂಬಂಧ ಚಿಕಿತ್ಸೆ ಪಡೆಯಲು ನಾನು ಅ.18ರಂದು ಖಾಸಗಿ ಕ್ಲಿನಿಕ್‌ಗೆ ಹೋಗಿದ್ದೆ.
ಚಿಕಿತ್ಸೆ ನೀಡುವಾಗ ವೈದ್ಯರು ನನ್ನೊಂದಿಗೆ ಲೈಂಗಿಕ ದುರುದ್ದೇಶದಿಂದ ನನ್ನ ದೇಹದ ವಿವಿಧ ಭಾಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದಾರೆ. ನನ್ನೊಂದಿಗೆ 30 ನಿಮಿಷಗಳ ಕಾಲ ಮಾತನಾಡಿ ಎರಡು ಬಾರಿ ಲೈಂಗಿಕ ಆಸೆಯಿಂದ ಕರೆದು ತಬ್ಬಿಕೊಂಡು ಎದೆಯ ಭಾಗ ಮುಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.




