March 13, 2026

ಸುಳ್ಯ: ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ: ಮೂವರಿಗೆ ಗಾಯ

0
image_editor_output_image654538475-1759214732826.jpg

ಸುಳ್ಯ: ಎರಡು ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಗಾಯಗೊಂಡ ಘಟನೆ ಮಾಣಿ-ಮೈಸೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕನಕಮಜಲು ಸಮೀಪದ ಪಂಜಿಗುಂಡಿ ಬಳಿ ನಡೆದಿದೆ.

ಸುಳ್ಯದಿಂದ ಮಂಗಳೂರು ಕಡೆ ಹೋಗುತ್ತಿದ್ದ ಬೊಲೇನೋ ಕಾರು ಹಾಗೂ ಪುತ್ತೂರಿನಿಂದ ಗುತ್ತಿಗಾರು ಕಡೆಗೆ ಬರುತ್ತಿದ್ದ ಆಲ್ಟೊ ಕಾರು ನಡುವೆ ಈ ಅಪಘಾತ ಸಂಭವಿಸಿದೆ. ಘಟನೆಯಿಂದ ಎರಡು ಕಾರುಗಳು ಜಖಂ ಗೊಂಡಿದ್ದು ಬೋಲೇನೋ ಕಾರು ಚಾಲಕನಿಗೂ ಸೇರಿ ಆಲ್ಟೊಕಾರಿನಲ್ಲಿದ್ದ ಗುತ್ತಿಗಾರಿನ ಮೂವರಿಗೂ ಗಾಯವಾಗಿದ್ದು ಅವರೆಲ್ಲರನ್ನೂ ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!