March 5, 2026

ಕಂಬಳಬೆಟ್ಟು ಉಸ್ತಾದ್ ಇಬ್ರಾಹಿಂ ಮದನಿ ರವರಿಗೆ ಗೌರವಾರ್ಪಣೆ

0
image_editor_output_image-1777544140-1757859621149

ಕಂಬಳಬೆಟ್ಟು ಮುಹಿಯುದ್ದೀನ್ ಮತ್ತು ಇಬ್ರಾಹಿಂ ಜಮಾತ್ ಕಮಿಟಿಯಿಂದ ಆಯೋಜಿಸಲಾದ ಮಿಲಾದ್ ಫೆಸ್ಟ್ 2025 ಕಾರ್ಯಕ್ರಮದಲ್ಲಿ ಕಂಬಳಬೆಟ್ಟು ಮಸೀದಿಯಲ್ಲಿ ನಿರಂತರವಾಗಿ 22 ವರ್ಷಗಳ ಕಾಲ ಮದರ್ರಿಸ್ ಹಾಗೂ ಖತೀಬ್ ಆಗಿ ಸೇವೆ ಸಲ್ಲಿಸಿದ ಉಸ್ತಾದ್ ಇಬ್ರಾಹಿಂ ಮದನಿ ರವರಿಗೆ ಗೌರವಾರ್ಪಣೆ ಕಾರ್ಯಕ್ರಮ ನೆರವೇರಿತು.


ಕಾರ್ಯಕ್ರಮದಲ್ಲಿ ಜಮಾತ್ ಪ್ರಧಾನ ಕಾರ್ಯದರ್ಶಿ ನಾಸಿರ್ ಅಲಾದಿನಗರ ಉಸ್ತಾದರವರ ಎರಡು ದಶಕಗಳ ಸೇವಾ ಪಯಣವನ್ನು ಸ್ಮರಿಸುವ ಗೌರವ ಪತ್ರವನ್ನು ಓದಿದರು. ಬಳಿಕ ಜಮಾಅತ್ ಅಧ್ಯಕ್ಷರು ಡಾ ಅಬ್ದುಲ್ ಬಶೀರ್ ವಿ ಕೆ ರವರ ನೇತೃತ್ವದಲ್ಲಿ ಉಸ್ತಾದರಿಗೆ ಗೌರವ ಫಲಕವನ್ನು ನೀಡಿ ಗೌರವಿಸಲಾಯಿತು.


ಬಳಿಕ ಮಾತನಾಡಿದ ಉಸ್ತಾದ್ ಇಬ್ರಾಹಿಂ ಮದನಿ ತಮ್ಮ ಸೇವಾ ಅವಧಿಯಲ್ಲಿ ಕಂಬಳಬೆಟ್ಟು ಜಮಾಅತಿನ ಜನರು ತೋರಿಸಿದ ಸಹಕಾರ ಮತ್ತು ಪ್ರೋತ್ಸಾಹವನ್ನು ಕೃತಜ್ಞತೆಯಿಂದ ನೆನಪಿಸಿಕೊಂಡರು.


ಕಾರ್ಯಕ್ರಮದಲ್ಲಿ ಮುದರ್ರಿಸ್ ಅಬೂಸ್ವಾಲಿಹ್ ಸಖಾಫಿ, ಜಮಾಅತ್ ಕಮಿಟಿಯ ಉಪಾಧ್ಯಕ್ಷರು ಅಬ್ದುಲ್ ರಝಾಕ್ ಬಾಂಬೆ, ಕೋಶಾಧಿಕಾರಿ ಅಬೂಬಕರ್ ನಕ್ಕರೆ, ಸದರ್ ಮುಅಲ್ಲಿಂ ಹನೀಫ್ ಸಖಾಫಿ, ಮುಅಲ್ಲಿಂ ನಝೀರ್ ಸಅದಿ, ಅಶ್ರಫ್ ಮುಸ್ಲಿಯಾರ್, ಇಬ್ರಾಹಿಂ ಮದನಿ, ಜಮಾಅತ್ ಕಮಿಟಿಯ ಸದಸ್ಯರು ಹಾಗೂ ಊರಿನ ಹಲವಾರು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!