ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಿ ಯುವಕನ ಹುಚ್ಚಾಟ: ವಿಡಿಯೋ viral
ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ ಲೈಕ್ಸ್ ಮತ್ತು ವೀವ್ಸ್ ಗಾಗಿ ಯುವಕರು ಈ ಮಟ್ಟಕ್ಕೆ ಇಳಿಯುತ್ತಾರೆ ಎಂಬ ಪ್ರಶ್ನೆ ಈ ವಿಡಿಯೋದರೆ ಗೊತ್ತಾಗುತ್ತದೆ. ರೀಲ್ಸ್ ನಿಂದಲೇ ಫೇಮಸ್ ಆಗಲು ತಮ್ಮ ಜೀವವನ್ನೇ ಪಣಕ್ಕಿಡಲು ಮುಂದಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವಕನೊಬ್ಬ ರೀಲ್ಸ್ ಕ್ರೇಜ್‌ಗೆ ಬಿದ್ದು ಎದುರಿಗೆ ರೈಲು ಬರುತ್ತಿದ್ದರೂ ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಿದ್ದಾನೆ. ಈತನ ಆಯಸ್ಸು ಗಟ್ಟಿ ಇದೆ ಕಾಣಿಸುತ್ತೆ, ಪ್ರಾಣಾಪಯದಿಂದ ಪಾರಾಗಿದ್ದಾನೆ. ಎದೆ ಝಲ್ ಎನಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.




