ವಿಟ್ಲ: ಕೆಲಿಂಜ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ವತಿಯಿಂದ ನೂರೇ ಮದೀನಾ ಕಾರ್ಯಕ್ರಮ
ವಿಟ್ಲ: ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕೆಲಿಂಜ ಇದರ ವತಿಯಿಂದ ನೂರೇ ಮದೀನಾ ಈದ್ ಮಿಲಾದ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮುಹಿಯುದ್ದೀನ್ ಜುಮಾ ಮಸೀದಿ ಖತೀಬರು ಮುಹಮ್ಮದ್ ಅಲಿ ಫೈಝಿಯವರ ದುವಾ ಪ್ರಾರ್ಥನೆಗೈದರು. ಮದ್ರಸ ಸದರ್ ಉಸ್ತಾದ್ ಅಬೂಬಕ್ಕರ್ ಸಿದ್ದೀಕ್ ಫೈಝಿ ಸೆರ್ಕಳ ಕಾರ್ಯಕ್ರಮಕ್ಕೆ ಸ್ವಾಗತ ಆಶೀರ್ವಚನ ನೀಡಿದರು.
ಖತೀಬ್ ಉಸ್ತಾದ್ ಮುಹಮ್ಮದ್ ಅಲಿ ಫೈಝಿಯವರು ಕಾರ್ಯಕ್ರಮಕ್ಕೆ ಉದ್ಘಾಟಿಸಿ ಲೋಕಾನುಗ್ರಹಿ ಮುಹಮ್ಮದ್ ಪೈಗಂಬರ್ (ಸ.ಅ) ತಂಙಳ್ ರವರ ಜನ್ಮ ದಿನಾಚರಣೆ ಮಹತ್ವದ ಬಗ್ಗೆ ಮಾತನಾಡಿದರು.
ಮದ್ರಸ ಮುಅಲ್ಲಿಂ ಹಸೈನಾರ್ ಮುಸ್ಲಿಯಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಜಮಾಅತ್ ಅಧ್ಯಕ್ಷರು ಅಬ್ದುಲ್ ಕರೀಂ ಕಂಪದಬೈಲು, ಮದ್ರಸ ಕಮಿಟಿ ಅಧ್ಯಕ್ಷ ಸುಭಾನ್ ಮುನ್ನ , ಹಸನ್ ಪಾತ್ರತೋಟ, ಉಸ್ತಾದ್ ಕೆದುಮೂಲೆ ಇಸ್ಮಾಯಿಲ್ ಹನೀಫಿ ವಿಟ್ಲ ಉಪಸ್ಥಿತರಿದ್ದರು. ಮಸೀದಿ ಕಾರ್ಯದರ್ಶಿ ಮಹಮ್ಮದ್ ಬಶೀರ್ ನಿರೂಪಿಸಿದರು.




