March 18, 2026

ಬೆಳ್ತಂಗಡಿ: ಕಾಸಿಂ ಪದ್ಮುಂಜರನ್ನು ದೋಷಮುಕ್ತಗೊಳಿಸಿದ ಕೋರ್ಟ್

0
image_editor_output_image-1602495836-1756361322624.jpg

ಕಣಿಯೂರು: ಒಂದಕ್ಕಿಂತ ಹೆಚ್ಚು ಬಿ.ಪಿ.ಎಲ್. ಕಾರ್ಡ್ ಪಡೆದು ಸರಕಾರಕ್ಕೆ ವಂಚನೆ ನಡೆಸಿದ್ದಾರೆಂಬ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಎದುರಿಸುತ್ತಿದ್ದ ಕಾಸಿಂ ಪದ್ಮುಂಜರನ್ನು ದೋಷಮುಕ್ತಗೊಳಿಸಿ ಬೆಳ್ತಂಗಡಿ ನ್ಯಾಯಾಲಯ ಆದೇಶ ಮಾಡಿದೆ.

ಕಣಿಯೂರು ಗ್ರಾ.ಪಂ. ನಲ್ಲಿ ಪಂಪು ಚಾಲಕರಾಗಿರುವ ಕಾಸಿಂ ಪದ್ಮುಂಜ ಎಂಬವರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಒಂದೇ ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚು ನಾಲ್ಕು ಪಡಿತರ ಚೀಟಿಗಳನ್ನು ಪಡೆದಿದ್ದಾರೆ ಎಂದು ಅ. 2019ರಲ್ಲಿ ಪಂಚಾಯತ್‌ ಅಧ್ಯಕ್ಷರಾಗಿದ್ದ ಸುನಿಲ್‌ ಸಾಲಿಯಾನ್ ಎಂಬವರು ಬೆಳ್ತಂಗಡಿ ತಹಶೀಲ್ದಾ‌ರ್ ಗಣಪತಿ ಶಾಸ್ತ್ರಿಯವರಿಗೆ ದೂರು ನೀಡಿದ್ದರು.

ಈ ದೂರಿನ ಹಿನ್ನಲೆಯಲ್ಲಿ ಬೆಳ್ತಂಗಡಿ ತಹಶೀಲ್ದಾರರು ಕಾಸಿಂ ಪದ್ಮುಂಜ ರವರಿಗೆ ನೋಟೀಸ್ ಜಾರಿ ಮಾಡಿ ನೀವು ಪಂಚಾಯತಿ ಉದ್ಯೋಗಿಯಾಗಿದ್ದು ಒಂದಕ್ಕಿಂತ ಹೆಚ್ಚು ಬಿಪಿಎಲ್ ಪಡಿತರ ಚೀಟಿ ಪಡೆದು ಸರಕಾರಕ್ಕೆ 80 ಸಾವಿರ ರೂಪಾಯಿ ನಷ್ಟ ಉಂಟುಮಾಡಿದ್ದೀರಿ ಕೂಡಲೇ 80 ಸಾವಿರ ರೂಪಾಯಿ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು ಇಲ್ಲವಾದರೆ ಕಲಂ 417 ಮತ್ತು 420ರಂತೆ ನಿಮ್ಮ ಮೇಲೆ ಕಾನೋನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!