February 1, 2026

ಕಲ್ಲಡ್ಕ ಪ್ರಭಾಕರ ಭಟ್ ನನ್ನ ಗುರು ಅಂತ ಯಾರು ಹೇಳಿದ್ದಾರೆ ಗೊತ್ತಿಲ್ಲ, ನನ್ನ ಗುರು ಭಗವಾಧ್ವಜ: ಸಂಸದ ಬ್ರಿಜೇಶ್ ಚೌಟ

0
image_editor_output_image-445918979-1756099573367.jpg

ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವ ಎಸ್ ಐಟಿ ತನಿಖೆ ಬಗ್ಗೆ ಪಕ್ಷದ ನಿಲುವಿಗೆ ನಾನು ಬದ್ದ , ತನಿಖೆ ನಡೆಯುತ್ತಿರುವ ವೇಳೆ ನಾನು ಈ ಕುರಿತಂತೆ ಯಾವುದೇ ಕಮೆಂಟ್ ಮಾಡುವುದಿಲ್ಲ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳ ಪ್ರಕರಣ ಬಗ್ಗೆ ಉಡುಪಿ ಸಂಸದರು ಸದನದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ರು. ಯೂಟ್ಯೂಬರ್ ಗಳಿಗೆ ಬೇರೆ ಬೇರೆ ಕಡೆಗಳಿಂದ ಹಣ ಬಂದಿದೆ. ಕ್ಷೇತ್ರದ ವಿರುದ್ದ ಷಡ್ಯಂತ್ರಕ್ಕೆ ಯೂಟ್ಯೂಬರ್ ಗಳಿಗೆ ಹಣ ಬಂದಿದೆ, ಇದರ ಬಗ್ಗೆ ಸೂಕ್ತ ತನಿಖೆಗೆ ಈಗಾಗಲೇ ಆಗ್ರಹಿಸಲಾಗಿದೆ. ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ಪಕ್ಷ ಮತ್ತು ಜನಪ್ರತಿನಿಧಿಗಳ ನಿಲುವು ಈಗಾಲೂ ಸ್ಪಷ್ಟವಾಗಿದ್ದು, ಧರ್ಮಸ್ಥಳ ಹಿಂದೂಗಳ ಧಾರ್ಮಿಕ ಕೇಂದ್ರ ಭಾವನೆಗಳ ಕೇಂದ್ರವಾಗಿದೆ, ಯಾವುದೇ ಕೇಸ್ ನ್ನು ಇಟ್ಟುಕೊಂಡು ಶೃದ್ದಾ ಕೇಂದ್ರಗಳ ಮೇಲೆ ಅಪಮಾನ ಮಾಡುವುದು, ಭಕ್ತರ ಭಾವನೆಗಳಿಗೆ ಘಾಸಿಗೊಳಿಸುವುದನ್ನು ಸಹಿಸುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಸೌಜನ್ಯ ಪ್ರಕರಣ ಮರು ತನಿಖೆ ಆಗಬೇಕು ಎನ್ನವುದನ್ನು ಹರೀಶ್ ಪೂಂಜಾ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ. ಸೌಜ್ಯನ್ಯ ತನಿಖೆಯನ್ನು ಮಿಕ್ಸ್ ಮಾಡಿ ಶೃದ್ದಾಕೇಂದ್ರಗಳ ಮೇಲೆ ದಾಳಿ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದರು. ಎಸ್ಐಟಿ ತನಿಖೆ ಮಾಡ್ತಾ ಇದೆ ಮೊದಲು ಎಸ್ಐಟಿಯನ್ನು ಸ್ವಾಗತಿಸಿದ್ದು ಬಿಜೆಪಿ ಪಕ್ಷ, ಜನಪ್ರತಿನಿಧಿಗಳಾಗಿ ತನಿಖೆ ವೇಳೆ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಮಾತನಾಡುದು ಸರಿಯಲ್ಲ. ಇದ್ರ ಬಗ್ಗೆ ತನಿಖೆ ಯಾಗಿ ಸರಿಯಾದ ಕ್ರಮಕೈಗೊಳ್ಳಲಿ ಎಂದು ಮಂಗಳೂರಿನಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಧರ್ಮಸ್ಥಳದ ಬಗ್ಗೆ ನಿಮ್ಮ ಗುರುಗಳು ಕಲ್ಲಡ್ಕ ಪ್ರಭಾಕರ ಭಟ್ ಯಾಕೆ ಮಾತನಾಡಿಲ್ಲ ಎಂದ ಪ್ರಶ್ನೆಗೆ ಉತ್ತರಿಸಿದ ನನ್ನ ಗುರು ಕಲ್ಲಡ್ಕ ಪ್ರಭಾಕರ ಭಟ್ ಅಂತ ಯಾರು ಹೇಳಿದ್ದಾರೆ ಗೊತ್ತಿಲ್ಲ, ನನ್ನ ಗುರು ಭಗವಾಧ್ವಜ, ಆರ್ ಎಸ್ಎಸ್ ನ ಸ್ವಯಂ ಸೇವಕರು, ಹಿರಿಯರಿಗೆ ನಾವು ಗೌರವ ಕೊಡುತ್ತೇವೆ ಎಂದರು.

Leave a Reply

Your email address will not be published. Required fields are marked *

error: Content is protected !!