February 1, 2026

ಸೌಜನ್ಯಳ ತಾಯಿ ಕುಸುಮಾವತಿಯನ್ನು ವಿಚಾರಣೆಗೆ ಒಳಪಡಿಸಬೇಕು: ಚಕ್ರವರ್ತಿ ಸೂಲಿಬೆಲೆ

0
image_editor_output_image2065518351-1755930160952.jpg

ಬೆಂಗಳೂರು: ಸೌಜನ್ಯ ತಾಯಿ ಕುಸುಮಾವತಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಜಾತ ಭಟ್‌ ಅವರನ್ನು ಹೇಗೆ ಈ ಗುಂಪು ಷಡ್ಯಂತ್ರ ಮಾಡಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿತ್ತು. ಹೆಣ್ಣು ಮಕ್ಕಳ ವಿಚಾರ ಬಂದಾಗ ಸಮಾಜ ಬೇಗ ಕರಗುತ್ತದೆ. ಈ ಗುಂಪು ಇದನ್ನೇ ಗುರಾಣಿಯನ್ನಾಗಿ ಇಟ್ಟುಕೊಂಡು ಸುಜಾತ ಭಟ್‌ ಅವರನ್ನು ಮುಂದಿರಿಸಿ ದಿನ ದಿನೇ ಕಥೆ ಕಟ್ಟುತ್ತಿದ್ದರು ಎಂದು ಹೇಳಿದರು.

ಸೌಜನ್ಯ ಮೇಲೆ ಅತ್ಯಾಚಾರವಾಗಿದೆ. ಆ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ಅತ್ಯಾಚಾರ ಮಾಡಿದವರು ಜೈಲಿಗೆ ಹೋಗಬೇಕು ಎಂದು ನಾನು ಆಗ್ರಹ ಮಾಡುತ್ತೇನೆ. ಈ ಬದ್ಧತೆಯನ್ನು ಇಟ್ಟುಕೊಂಡೇ ನಾನು ಮಾತನಾಡುತ್ತಿದ್ದೇನೆ. ಈಗ ಹೇಗೆ ಅನಾಮಿಕ, ಸುಜತಾ ಭಟ್‌ ಹೇಗೆ ಷಡ್ಯಂತ್ರದ ಭಾಗವಾಗಿದ್ದಾರೋ ಅದೇ ರೀತಿ ಸೌಜನ್ಯ ತಾಯಿ ಕುಸುಮಾವತಿ ಕೂಡ ಯಾವುದೋ ಷಡ್ಯಂತ್ರದ ಭಾಗವಾಗಿರುವುದು ಮೆಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!