ವಿಟ್ಲ: ಗಣೇಶೋತ್ಸವ ಮತ್ತು ಈದ್ ಮಿಲಾದ್ ಕಾರ್ಯಕ್ರಮದ ಹಿನ್ನಲೆ: ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ
ವಿಟ್ಲ: ಮುಂಬರುವ ದಿನಗಳಲ್ಲಿ ನಡೆಯಲಿರುವ ಮಿಲಾದುನ್ನೆಬಿ ಮತ್ತು ಗಣೇಶೋತ್ಸವ ಕಾರ್ಯಕ್ರಮದ ಹಿನ್ನಲೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.


ಶಾಂತಿ ಸಭೆಯಲ್ಲಿ ವಿಟ್ಲ ಠಾಣಾ ಎಸ್ ಐ ರಾಮಕೃಷ್ಣರವರು ಕಡ್ಡಾಯ ಪೊಲೀಸ್ ಅನುಮತಿ ಮತ್ತು ಸಮಯದ ನಿರ್ಬಂಧ ಪಾಲನೆಯ ಬಗ್ಗೆ ಮಾಹಿತಿ ನೀಡಿದರು.
1. ಪೊಲೀಸ್ ಹಾಗೂ ಇತರ ಸಂಬಂಧಿತ ಇಲಾಖೆಗಳ ಲಿಖಿತ ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸಬಾರದು. ಯಾವುದೇ ಕಾರಣಕ್ಕೂ ರಾತ್ರಿ 11:30 ಗಂಟೆಯ ನಂತರ ಯಾವುದೇ ಮೆರವಣಿಗೆಯನ್ನು ನಡೆಸಲು ಅನುಮತಿಸಲಾಗದು. ಈ ಸಮಯದ ನಂತರ ನಡೆಯುವ ಯಾವುದೇ ಸಮಾವೇಶವನ್ನು ಕಾನೂನುಬಾಹಿರ ಸಮಾವೇಶವೆಂದು ಪರಿಗಣಿಸಲಾಗುವುದು. ಖಾಸಗಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಆಸ್ಥಳದ ಮಾಲೀಕರಿಂದ ‘ನಿರಾಕ್ಷೇಪಣಾಪತ್ರ’ (NOC) ಪಡೆದು ಹಾಜರುಪಡಿಸುವುದು ಕಡ್ಡಾಯವಾಗಿದೆ. ಅನುಮೋದಿತ ಸ್ಥಳ ಅಥವಾ ಮಾರ್ಗದಲ್ಲಿಯೇ ಕಾರ್ಯಕ್ರಮ ನಡೆಸಬೇಕು. ಯಾವುದೇ ವ್ಯತಿರಿಕ್ತತೆಯನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.
2. ಡಿ.ಜೆ ಸಂಪೂರ್ಣ ನಿಷೇಧ: ಧ್ವನಿವರ್ಧಕಗಳಿಗೆ ಅನುಮತಿ ಅಗತ್ಯ ಡಿ.ಜೆ, ಜೋರಾದ ಸ್ಪೀಕರ್ ಅಥವಾ ಈ ರೀತಿಯ ಯಾವುದೇ ಧ್ವನಿವರ್ಧಕ ಉಪಕರಣಗಳ ಬಳಕೆ ಸಂಪೂರ್ಣ ನಿಷೇಧವಾಗಿದೆ. ಧ್ವನಿವರ್ಧಕ ಬಳಕೆಗೆ ಮುಂಚಿತವಾಗಿ ಅನುಮತಿ ಪಡೆಯುವುದು ಅಗತ್ಯವಿದೆ ಮತ್ತು ರಾತ್ರಿ 10:00 ಗಂಟೆಗೆ ಅವುಗಳನ್ನು ಸ್ಥಗಿತ ಗೊಳಿಸಬೇಕು. ಶಬ್ದ ಮಟ್ಟಗಳು ಈ ಮಿತಿಗಳ ಒಳಗಿರಬೇಕು: ವಾಣಿಜ್ಯ ಪ್ರದೇಶ – 65 ಡೆಸಿಬಲ್, ವಾಸಸ್ಥಳ 55 ಡೆಸಿಬಲ್, ನಿಶ್ಯಬ್ದ ವಲಯ 50 d໙.
3. ಧಾರ್ಮಿಕ ವಿರೋಧಿ ಘೋಷಣೆಗಳು ಮತ್ತು ದ್ವೇಷ ಭಾಷಣ ದ್ವೇಷ ನಿಷೇಧ (ಮುದ್ರಣ & ಸಾಮಾಜಿಕ ಮಾಧ್ಯಮದಲ್ಲಿ): ಯಾವುದೇ ಘೋಷಣೆಗಳು, ಭಿತ್ತಿಪತ್ರಗಳು, ಪ್ರದರ್ಶನಗಳು ಅಥವಾ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ವಿಷಯಗಳು ಯಾವುದೇ ಧರ್ಮದ ವಿರೋಧ ಅಥವಾ ದ್ವೇಷವನ್ನು ಉಂಟು ಮಾಡುವ ರೀತಿಯಲ್ಲಿ ಇರಬಾರದು.
4. ಜನಸಂದಣಿಗೆ ಕಡ್ಡಾಯ ಸ್ವಯಂ ಸೇವಕರ ನೇಮಕಾತಿ: ಅನುಮತಿತ ಸಾಮರ್ಥ್ಯ ಮೀರದಂತೆ ಜನ ಸಮೂಹ ನಿಯಂತ್ರಿಸಬೇಕು. ಸಮರ್ಪಕವಾಗಿ ಸ್ವಯಂಸೇವಕರನ್ನು ನಿಯೋಜಿಸಿ ಕೊಳ್ಳಬೇಕು.
5. ಪೆಂಡಾಲ್ ಎತ್ತರ ನಿಯಮಗಳು ಮತ್ತು ವಾಹನ ಸುರಕ್ಷಾ ನಿಯಮ ಪಾಲನೆ: ಪೆಂಡಾಲು, ಕಾರ್ಯಕ್ರಮದಲ್ಲಿ ಬಳಸುವ ವಾಹನಗಳು ಇತ್ಯಾದಿಗಳ ಎತ್ತರಗಳ ಕಾನೂನು ಅಥವಾ ಮೆಸ್ಕಾಂ ಮಾನದಂಡಗಳನ್ನು ಮೀರುವಂತಿರಬಾರದು. ವಾಹನಗಳು ನೋಂದಣಿ ಪತ್ರ, ದೃಢತೆ ಪ್ರಮಾಣಪತ್ರ, ವಿಮೆ ಪತ್ರ ಹೊಂದಿರಬೇಕು.”
6. ಅಗ್ನಿಶಾಮಕ ಮತ್ತು ತುರ್ತು ವ್ಯವಸ್ಥೆಗಳ ಒದಗಿಕೆ: ಅಗ್ನಿ ನಂದಕಗಳು, ಆಂಬುಲೆನ್ಸ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಟ್ಟು ಕೊಳ್ಳುವುದು ಕಡ್ಡಾಯವಾಗಿವೆ.
7. ವಾಹನ ಸಂಚಾರ ಮುಕ್ತವಾಗಿ ನಿರ್ವಹಣೆ ಮತ್ತು ತುರ್ತು ಮಾರ್ಗಗಳ ನಿರ್ಬಂಧ: ವಾಹನ ಮತ್ತು ಪಾವಚಾರಿ ಸಂಚಾರಕ್ಕೆ ಯಾವುದೇ ತಡೆ ಇಲ್ಲದಂತೆ ವ್ಯವಸ್ಥೆ ಮಾಡಬೇಕು. ತುರ್ತು ಮಾರ್ಗಗಳಿಗೆ ತಡೆ ಉಂಟು ಮಾಡಲಾರದು. ನಿಗದಿತ ಸ್ಥಳದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಇರಬೇಕು.
8. ಸಾರ್ವಜನಿಕ ಖಾಸಗಿ ಆಸ್ತಿಗೆ ಹಾನಿ ಮಾಡಬಾರದು: ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿ ಉಂಟು ಮಾಡಬಾರದು
9. ಕಾರ್ಯಕ್ರಮದ ಪೂರ್ಣ ವಿವರಗಳನ್ನು ಮುಂಚಿತವಾಗಿ ನೀಡಬೇಕು. ಅನುಮತಿ ಪತ್ರದಲ್ಲಿ ನೀಡಿದ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಪೊಲೀಸ್ ಸೂಚನೆಗಳನ್ನು ಪಾಲಿಸಬೇಕು.
10. ಮಹಿಳೆಯರ ಸುರಕ್ಷತೆಗೆ ಶೂನ್ಯ ಸಹಿಷ್ಣುತೆ ನೀತಿ: ಕಾರ್ಯಕ್ರಮದ ಸಮಯ ಮಹಿಳೆಯರ ಚುಡಾವಣೆ, ಹಿಂಬಾಲಿಸುವಿಕೆ, ಲೈಂಗಿಕ ಕಿರುಕುಳ ಮುಂತಾದ ಅಪರಾಧಗಳು ನಡೆಯದಂತ ‘ನೋಡಿಕೊಳ್ಳಬೇಕು.
11. ಸ್ವಚ್ಛತೆ, ಪ್ಲೆಕ್ಸ್ ಮತ್ತು ಬ್ಯಾನರ್ ನಿಯಂತ್ರಣ: ಯಾವುದೇ ಬ್ಯಾನರ್ ಅಥವಾ ಪ್ಲೆಕ್ಸ್ ಅನ್ನು ಸಂಬಂಧಿತ ಪ್ರಾಧಿಕಾರದಿಂದ ಮುಂಚಿತ ಅನುಮತಿ ಇಲ್ಲದೆ ಹಾಕಬಾರದು. ಕಾರ್ಯಕ್ರಮ ಮುಗಿದ ತಕ್ಷಣ ಅವುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು.
12. ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ, ಹರಿತವಾದ ಆಯುಧಗಳು ಇತ್ಯಾದಿ ಅಪಾಯಕಾರಿ ಆಯುಧಗಳ ಪ್ರದರ್ಶನ ಮತ್ತು ಸಾಗಾಟ ಮಾಡಬಾರದು.
13. ಡೋನ್‌ಗಳನ್ನು ಬಳಸಲು ಮುಂಚಿತ ಅನುಮತಿ ಕಡ್ಡಾಯ: ಮುಂಚಿತ ಅನುಮತಿ ಇಲ್ಲದೆ ಯಾವುದೇ ಡೋನ್ ಅಥವಾ UAV ಬಳಸುವುದು ನಿಷಿದ್ಧ,
14. ಮೆರವಣಿಗೆಯಲ್ಲಿ ಪ್ರಾಣಿಗಳ ಬಳಕೆಗೆ ನಿಯಂತ್ರಣ: ಮೆರವಣಿಗೆ ಅಥವಾ ಪ್ರದರ್ಶನಗಳಲ್ಲಿ ಪ್ರಾಣಿಗಳನ್ನು ಬಳಸಲು ಮುಂಚಿತ ಅನುಮತಿ ಪಡೆಯಬೇಕು ಮತ್ತು ಪ್ರಾಣಿಹಕ್ಕುಗಳ ನಿಯಮ ಪಾಲನೆ ಕಡ್ಡಾಯ.
15. ಪೊಲೀಸ್ ತಪಾಸಣೆಗೆ ಅಡ್ಡಿ ಮಾಡುವುದು ನಿಷೇಧ: ಪೊಲೀಸರು ಅಥವಾ ಅಧಿಕೃತ ಅಧಿಕಾರಿಗಳು ಯಾವುದೇ ಸಮಯದಲ್ಲಿ ಸ್ಥಳವನ್ನು ತಪಾಸಣೆ ಮಾಡಬಹುದು. ಅದಕ್ಕೆ ಅಡ್ಡಿ ಪಡಿಸಬಾರದು.
16. ಅನುಮಾನಾಸ್ಪದ ಚಟುವಟಿಕೆಗಳ ವರದಿ ನೀಡುವುದು ಕಡ್ಡಾಯ: ಆಯೋಜಕರು ಮತ್ತು ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆ, ಸುಳ್ಳು ಮಾಹಿತಿ ಅಥವಾ ಗಲಭೆಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಅಥವಾ 112 ಗೆ ಕರೆ ಮಾಡಿ ವರದಿ ಮಾಡಬೇಕು.
17. 24×7 ಭದ್ರತೆ ಮತ್ತು ಸಿಸಿ ಟಿವಿ ಕಡ್ಡಾಯ: ಆಯೋಜಕರು ಸ್ಥಳದಲ್ಲಿ 24×7 ಭದ್ರತಾ ಸಿಬ್ಬಂದಿ ಯನ್ನು ನಿಯೋಜಿಸಬೇಕು. ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಹಾಗೂ 30 ದಿನಗಳ ಕಾಲ ದೃಶ್ಯಾವಳಿ ಸಂಗ್ರಹಿಸಬೇಕು.
18. ನೀವು ಈಗಾಗಲೇ ಠಾಣೆಗೆ ನೀಡಿದ ಪತ್ರದಲ್ಲಿ ತಿಳಿಸಿದಷ್ಟೇ ಜನ ಸಭೆಯನ್ನುದ್ದೇಶಿಸಿ ಮಾತನಾಡತಕ್ಕದ್ದು, ಹೊರತು ಉಳಿದವರು ಕಾನೂನು ಬಾಹಿರವಾಗಿ ಮಾತನಾಡಿದ್ದಲ್ಲಿ ಕಾನೂನಿನ ಅಡಿಯಲ್ಲಿ, ಕ್ರಮ ಜರುಗಿಸಲಾಗುವುದು.
ವಿಧಿಸಲಾದ ಯಾವುದೇ ಷರತ್ತುಗಳ ಉಲ್ಲಂಘನೆಯು ಭಾರತೀಯ ನ್ಯಾಯ ಸಂಹಿತೆ 2023, ಕರ್ನಾಟಕ ಪೊಲೀಸ್ ಕಾಯ್ದೆ 1963, ಪರಿಸರ ಸಂರಕ್ಷಣಾ ಕಾಯ್ದೆ 1986, ಮೋಟಾರು ವಾಹನ ಕಾಯ್ದೆ 1988, ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಶಸ್ತ್ರಾಸ್ತ್ರ ಕಾಯ್ದೆ 1959, ಡೋನ್ ನಿಯಮಗಳು 2021. ಸ್ಫೋಟಕಗಳ ಕಾಯ್ದೆ 1884. ಪ್ರಾಣಿ ಹಿಂಸೆ ತಡೆಕಾಯ್ದೆ ವಿಧಿಸಲಾಗುವುದು.




