February 2, 2026

ಸಂತೋಷ್ ಫ್ರೆಂಡ್ಸ್ ಕ್ಲಬ್ ಲೈಬ್ರೆರಿ ಪಾವಳದಲ್ಲಿ 33ನೇ ಮೊಸರು ಕುಡಿಕೆ ಮಹೋತ್ಸವ

0
image_editor_output_image-1907126515-1755620685637

ವರ್ಕಾಡಿ: ಸಂತೋಷ್ ಫ್ರೆಂಡ್ಸ್ ಕ್ಲಬ್ ಲೈಬ್ರೆರಿ ಪಾವಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 33ನೇ ಮೊಸರು ಕುಡಿಕೆ ಮಹೋತ್ಸವ ಕಾರ್ಯಕ್ರಮ ವನ್ನು ಸಂತೋಷ್ ಫ್ರೆಂಡ್ಸ್ ಕ್ಲಬ್.ರಿ. ಹಾಗೂ ಪ್ರೀತಿ ಮಹಿಳಾ ಸಮಾಜ. ರಿ. ಪಾವಳ ಇವರ ಸಹಭಾಗಿತ್ವದಲ್ಲಿ ವಿವಿಧ ಆಟೊಟ ಸ್ಪರ್ಧೆಗಳೊಂದಿಗೆ ಆಚರಿಸಲಾಯಿತು.

ಬೆಳಿಗ್ಗೆ ಕಾಸರಗೋಡು ಜಿಲ್ಲಾ ಆಸ್ಪತ್ರೆ ಕುಂಬಳೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ವರ್ಕಾಡಿ ಇದರ ವೈದ್ಯರು ಹಾಗೂ ಸಿಬಂದಿಗಳಿಂದ ಸುಖ ಸಂಜೀವಿನಿ ಉಚಿತ ಆ ರೋಗ್ಯ ತಪಾಸಣೆ ನಡೆಸಿದರು ಆರೋಗ್ಯ ವಿಮೆಯ ಮಾಹಿತಿ ಯನ್ನು ಶ್ರೀಮತಿ ಜ್ಯೋತಿ ಪಿ ನಿವೃತ್ತ ಶಿಶು ಅಭಿವೃದ್ಧಿ ಅಧಿಕಾರಿ ಮಂಜೇಶ್ವರ ನೀಡಿದರು.

ಸಂಜೆ ಪುಟಾಣಿ ಮಕ್ಕಳ ಶ್ರೀಕೃಷ್ಣ ವೇಷ ಪ್ರದರ್ಶನ ಗೊಂಡಿತು. ನಂತರ ನಡೆದ ಸಭಾ ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಲೈಬ್ರೆರಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ವಹಿಸಿದ್ದರು.

ತುಳುನಾಡ ಮಾಣಿಕ್ಯ ಚಿತ್ರನಟಅರವಿಂದ ಬೋಳಾರ್ ಉದ್ಘಾಟಿಸಿದರು. ತುಳು ಜಾನಪದ ಸಂಶೋಧನಾ ವಿದ್ಯಾರ್ಥಿ ವಿಜೇತ್ ಎಮ್ ಶೆಟ್ಟಿ ಮಂಜನಾಡಿ ತುಳುವೆರೆ ಅಟ್ಟೆಮಿ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಅತಿಥಿಗಳಾಗಿ ಶ್ರೀಮತಿ ಭಾರತಿ ಎಸ್ ಸುಳ್ಯಮೆ ಅಧ್ಯಕ್ಷರು ವರ್ಕಾಡಿ ಪಂಚಾಯತ್, ಶ್ರೀ ಅಬೂಬಕ್ಕರ್ ಸಿದ್ದಿಕ್ ಪಾಡಿ ಉಪಾಧ್ಯಕ್ಷರು ವರ್ಕಾಡಿ ಪಂಚಾಯತ್, ಶ್ರೀಮತಿ ಕಮಲಾಕ್ಷಿ ಜಿಲ್ಲಾ ಪಂಚಾಯತ್ ಸದಸ್ಯರು ಕಾಸರಗೋಡು, ಶ್ರೀ ರಾಧಾಕೃಷ್ಣ ರೈ ಉಮಿಯ ಉದ್ಯಮಿ, ಶ್ರೀ ವಿ ಕೆ ಉಮೇಶ್ ಕುಡುಪು ಉದ್ಯಮಿ ಮಂಗಳೂರು,ಪ್ರಭಾವತಿ ಚಂದ್ರಹಾಸ ಶೆಟ್ಟಿ ಪಾವಳ ಗುತ್ತು ಅಧ್ಯಕ್ಷೆ ಪ್ರೀತಿ ಮಹಿಳಾ ಸಮಾಜ ಪಾವಳ ಉಪಸ್ಥಿತರಿದ್ದರು.ಸಮಾರಂಭ ದಲ್ಲಿ ಅಕ್ಸರ ಸಂತ ಹರೆಕಳ ಹಾಜಬ್ಬ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಪ್ರೀತಿ ಡ್ಯಾನ್ಸ್ ಟ್ರೂಪ್ ಪಾವಳ ಇವರ ನೃತ್ಯ ವೈಭವ ನಡೆಯಿತು. ಹಾಗೂ ಸಂತೋಷ್ ಕಲಾವಿದರು ಪಾವಳ ತಂಡದಿಂದ ರವೀಂದ್ರ ಕುಲಾಲ್ ವರ್ಕಾಡಿ ರಚನೆಯ ನಮಡನೆ ಉಪ್ಪಡ್ ನಾಟಕ ಪ್ರಥಮ ಪ್ರದರ್ಶನ ಗೊಂಡಿತು. ಕಿಶೋರ್ ಕುಮಾರ್ ಪಾವಳ ಸ್ವಾಗತ ಹಾಗೂ ವಿಜಯಕುಮಾರ್ ಧನ್ಯವಾದವಿತ್ತರು

Leave a Reply

Your email address will not be published. Required fields are marked *

error: Content is protected !!