ಉಳ್ಳಾಲ: ಮೊಸರು ಕುಡಿಕೆ ಶೋಭಾಯಾತ್ರೆ ವೇಳೆ ಮಹಿಳಾ ಪೊಲೀಸ್ ನ ಮೈಮುಟ್ಟಿ ಅಶ್ಲೀಲ ಸನ್ನೆ: ಅಸೈಗೋಳಿಯ ಆರೋಪಿ ದೀಪಕ್, ಕಿರಣ್ ಬಂಧನ
ಮಂಗಳೂರು: ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ನಿನ್ನೆ ನಡೆದ ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆ ವೇಳೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಮಹಿಳೆ ಪೊಲೀಸ್ ಸಿಬ್ಬಂದಿಗೆ ಅಶ್ಲೀಲ ಕೈಸನ್ನೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಮಂಗಳೂರು ಮಾಲ್‌ಗಳು
ಬಂಧಿತರನ್ನು ಅಸೈಗೋಳಿ ನಿವಾಸಿ ದೀಪಕ್ ಮತ್ತು ತೊಕ್ಕೊಟ್ಟು ನಿವಾಸಿ ಕಿರಣ್ ಎಂದು ಗುರುತಿಸಲಾಗಿದೆ.
ತೊಕ್ಕೊಟ್ಟಿನ ಜೈ ವೀರಮಾರುತಿ ವ್ಯಾಯಾಮ ಶಾಲೆಯ ವತಿಯಿಂದ ನಡೆದ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಯ ಸಂದರ್ಭದಲ್ಲಿ ಘಟನೆ ನಡೆದಿದೆ.
ತೊಕ್ಕೊಟ್ಟುಮೊಸರು ಕುಡಿಕೆ ಶೋಭಾಯಾತ್ರೆ ವೇಳೆ 11.50 ರ ವೇಳೆಗೆ ತೊಕ್ಕೊಟ್ಟು ಒಳಪೇಟೆಯ ತಾಜ್ ಸೈಕಲ್ ಶಾಪ್ ಬಳಿ ತಲುಪಿದಾಗ ಯುವಕರ ಗುಂಪೊಂದು ಬ್ಯಾಂಡ್ ಬಾರಿಸುತ್ತಾ ಮೆರವಣಿಗೆ ಮುಂದೆ ಹೋಗಲು ಅವಕಾಶ ನೀಡದೆ ತೊಂದರೆ ನೀಡಿದ್ದಾರೆ.
ಈ ವೇಳೆ ಸ್ಥಳದಲ್ಲೇ ಇದ್ದ ಮಹಿಳಾ ಪೊಲೀಸರು ಯುವಕರಲ್ಲಿ ಮುಂದಕ್ಕೆ ಹೋಗುವಂತೆ ತಿಳಿಸಿದ್ದಾರೆ. ಈ ವೇಳೆ ಆರೋಪಿಗಳಲ್ಲಿ ಒಬ್ಬ ತನ್ನ ಕೈಬೆರಳುಗಳಲ್ಲಿ ಅಶ್ಲೀಲ ಸನ್ನೆ ಮಾಡಿ ನಿಂದಿಸಿದ್ದು, ಮತ್ತೊಬ್ಬ ಆರೋಪಿ ಮಹಿಳಾ ಪೊಲೀಸ್ ಸಿಬ್ಬಂದಿಯ ಮೈಮುಟ್ಟಿ ತಳ್ಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.




